March 13, 2026

ಮಂಗಳೂರು: ಹೊಟೇಲ್ ಉದ್ಯಮಿ ನಿತಿನ್ ಪೂಜಾರಿ ಅನುಮಾನಾಸ್ಪದ ಸಾವು

0
image_editor_output_image1197839748-1753261468413.jpg

ಮಂಗಳೂರು: ಹೊಟೇಲ್ ಉದ್ಯಮಿ ನಿತಿನ್ ಪೂಜಾರಿ(40) ಅವರು ಅಸ್ವಾಭಾವಿಕವಾಗಿ ಮೃತಪಟ್ಟಿದ್ದು, ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಶಂಕಿಸಲಾಗಿದೆ.

ಸೋಮವಾರ ತಡರಾತ್ರಿ ಮಣಗುಡ್ಡದ ಫ್ಲ್ಯಾಟ್‌ನಲ್ಲಿ ಅಸ್ವಸ್ಥಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಕದ್ರಿಯಲ್ಲಿ ಕೊಡಕ್ಕೆನ ಹೆಸರಿನ ಹೊಟೇಲ್‌ನ್ನು ಕೆಲವು ತಿಂಗಳ ಹಿಂದೆ ಆರಂಭಿಸಿದ್ದರು. ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗಿದೆ. ಅವರು ಮೂಲತಃ ಮರೋಳಿಯವರಾಗಿದ್ದು ಅವಿವಾಹಿತರಾಗಿದ್ದರು. ಬರ್ಕೆ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!