ಚಿಕ್ಕಮಗಳೂರು: ಪೊಲೀಸ್ ಕ್ವಾಟ್ರಸ್‌ನಲ್ಲೇ ಹೆಡ್ ಕಾನ್ ಸ್ಟೇಬಲ್ ನೇಣು ಬಿಗಿದು ಆತ್ಮಹತ್ಯೆ
ಚಿಕ್ಕಮಗಳೂರು : ಕ್ವಾಟ್ರಸ್‌ನಲ್ಲೇ ಹೆಡ್ ಕಾನ್ ಸ್ಟೇಬಲ್ ಒಬ್ಬರು ನೇಣಿಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬಾರ್ ಲೈನ್ ರಸ್ತೆಯಲ್ಲಿ ನಡೆದಿದೆ.
45 ವರ್ಷದ ಕಾಂತರಾಜ್ ಆತ್ಮಹತ್ಯೆ ಮಾಡಿಕೊಂಡವರು.
ಮೂಲತಃ ತರೀಕೆರೆ ತಾಲೂಕಿನ ಸುಣ್ಣದಹಳ್ಳಿ ಮೂಲದವರಾದ ಕಾಂತರಾಜ್ ಚಿಕ್ಕಮಗಳೂರು ಎಸ್‌ಪಿ ಕಚೇರಿಯಲ್ಲಿ ಕಂಪ್ಯೂಟರ್ ಸೆಕ್ಷನ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಈ ಹಿಂದೆ ನಡೆದ ಅಪಘಾತವೊಂದರಲ್ಲಿ ಕಾಂತರಾಜ್ ತನ್ನ ಬಲಗಾಲು ಕಳೆದುಕೊಂಡಿದು, ಕತಕ ಕಾಲು ಜೋಡಿಸಲಾಗಿತು.




