ಶಾಲಾ ಬಸ್ ನಿಂದ ಕೆಳಗ್ಗೆ ಬಿದ್ದು 2ನೇ ತರಗತಿ ವಿದ್ಯಾರ್ಥಿ ಸಾವು
ರಾಮನಗರ: ಖಾಸಗಿ ಶಾಲಾ ಬಸ್ನಿಂದ 2ನೇ ತರಗತಿ ವಿದ್ಯಾರ್ಥಿ ಕೆಳಗ್ಗೆ ಬಿದ್ದು ಸ್ಥಳದಲ್ಲೇ ಜೀವ ಬಿಟ್ಟಿರುವ ಘಟನೆ ಮಾಗಡಿ ತಾಲೂಕಿನ ಹುಚ್ಚಹನುಮೇಗೌಡನ ಪಾಳ್ಯ ಗ್ರಾಮದ ಬಳಿ ನಡೆದಿದೆ.
ಹೊಸಪಾಳ್ಯ ಜನತಾ ಕಾಲೋನಿ ನಿವಾಸಿ ಲೋಕೇಶ್ ಪುತ್ರ ರಜತ್ (7) ಮೃತ ಬಾಲಕ. ಮಾಗಡಿ ಪಟ್ಟಣದ ಎಸ್‍ಬಿಎಸ್ ಶಾಲೆಯಲ್ಲಿ ರಜತ್ 2ನೇ ತರಗತಿ ಓದುತ್ತಿದ್ದನು. ಎಂದಿನಂತೆ ಶಾಲೆಗೆ ಹೋಗಿದ್ದನು.
ಬಸ್ ತೆರಳುವ ಸಮಯದಲ್ಲಿ ವಾಹನದ ಬಾಗಿಲಿನಿಂದ ಬಾಲಕ ಬಿದ್ದಿದ್ದಾನೆ. ಇದನ್ನ ನೋಡಿದ ಬಾಲಕನ ಸಹೋದರಿ ಅಣ್ಣ ಕೆಳಗೆ ಬಿದ್ದ ಬಸ್ ನಿಲ್ಲಿಸಿ ಎಂದು ಸಹೋದರಿ ದುರ್ಷಿತಾ ಕೂಗಿದ್ದಾಳೆ.
ವಾಹನದ ಬಾಗಿಲು ಮುಚ್ಚದೆ ಇರುವುದೇ ಅಪಘಾತಕ್ಕೆ ಕಾರಣ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.
ಈ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ




