March 13, 2026

UAE: ವರದಕ್ಷಿಣೆ ಕಿರುಕುಳದಿಂದ ಮಹಿಳೆ ಆತ್ಮಹತ್ಯೆ

0
image_editor_output_image-1632659860-1752659549355.jpg

ತಿರುವನಂತಪುರಂ: ಯುನೈಟೆಡ್ ಅರಬ್ ಎಮಿರೇಟ್ಸ್‌ನ ಶಾರ್ಜಾದಲ್ಲಿ ಮಗುವಿನೊಂದಿಗೆ ಕೇರಳದ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದೆ.

32 ವರ್ಷದ ಕೇರಳ ಮಹಿಳೆಯ ಪತಿ ಮತ್ತು ಅತ್ತೆ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಲಾಗಿದೆ. ಕೇರಳದ ಕೊಲ್ಲಂ ಜಿಲ್ಲೆಯ ಮೂಲದ ಸಂತ್ರಸ್ತೆ ವಿಪಂಚಿಕಾ ಮಣಿಯನ್ ಜುಲೈ 8 ರಂದು ತನ್ನ ಶಾರ್ಜಾ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಆಕೆಯ ಒಂದು ವರ್ಷದ ಮಗಳು ಕೂಡ ಸಾವನ್ನಪ್ಪಿದ್ದಾಳೆ. ಮಗುವನ್ನು ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿರುವುದು ವಿಧಿವಿಜ್ಞಾನ ವರದಿಯಿಂದ ಬಹಿರಂಗವಾಗಿದೆ.

ಮೃತ ಮಹಿಳೆ ಬರೆದಿದ್ದಾರೆ ಎನ್ನಲಾದ ಮಲಯಾಳಂ ಭಾಷೆಯ ಕೈಬರಹದ ಪತ್ರವೊಂದು ಮನೆಯಲ್ಲಿ ಸಿಕ್ಕಿದೆ. ಮನೆಯಲ್ಲಿ ದೌರ್ಜನ್ಯ, ಚಿತ್ರಹಿಂಸೆ ನೀಡುತ್ತಿದ್ದರು ಎಂದು ಉಲ್ಲೇಖಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!