ಸುಳ್ಯ: ಚಾಲಕನ ನಿಯಂತ್ರಣ ತಪ್ಪಿ ಮನೆಯ ಕಾಂಪೌಂಡ್‌ಗೆ ಗುದ್ದಿದ ಕಾರು
ಸುಳ್ಯ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮನೆಯ ಕಾಂಪೌಂಡ್‌ಗೆ ಗುದ್ದಿದ ಘಟನೆ ಸುಳ್ಯದ ಗೂನಡ್ಕ ಬಳಿ ನಡೆದಿದೆ.
ಕಾರಿನಲ್ಲಿದ್ದವರು ಕಾಸರಗೋಡಿನವರು ಮೂಲತಃ ಎಂದು ಕೇರಳದ ತಿಳಿದುಬಂದಿದೆ. ಬೆಂಗಳೂರಿನಿಂದ ಸಂಪಾಜೆ ಮಾರ್ಗವಾಗಿ ಸುಳ್ಯಕ್ಕೆ ಬರುತ್ತಿದ್ದ ಕೇರಳದ ಕಾರು ಗೂನಡ್ಕದ ಶಿರಾಡಿ ಬೈಲೆ ದೈವಸ್ಥಾನಕ್ಕೆ ಹೋಗುವ ದ್ವಾರದ ಬಳಿಯ ತಿರುವಿನಲ್ಲಿ ತಲುಪಿದಾಗ ಒಮ್ಮಿಂದೊಮ್ಮೆಲೆ ಚಾಲಕನ ನಿಯಂತ್ರಣ ತಪ್ಪಿ ರಹೀಂ ಬೀಜದ ಕಟ್ಟೆ ಅವರ ಮನೆಯ ಕಾಪೌಂಟ್ ಗೆ ಗುದ್ದಿ ನಿಂತಿದೆ.
ಕಾರಿ ಗುದ್ದಿದ ಪರಿಣಾಮ ಕಾಂಪೌಂಡ್ ಗೆ ಹಾನಿಯಾಗಿದೆ. ಅಲ್ಲದೇ ಕಾರಿನ ಮುಂಭಾಗ ನಜ್ಜುಗಜ್ಜಾಗಿದೆ.




