March 13, 2026

ಮಂಗಳೂರು: “ಎಸ್‌ಎಲ್‌ವಿ ಬುಕ್‌ ಹೌಸ್‌”ನ ವಿಶೇಷ ಮಳಿಗೆ ಶುಭಾರಂಭ

0
image_editor_output_image-1084621193-1752333953653

ಮಂಗಳೂರು: ರಾಜ್ಯಾದ್ಯಾಂತ ಪುಸ್ತಕ ವಿತರಣೆ ಮತ್ತು ಸ್ಟೇಷನರಿ ಐಟಮ್‌ಗಳಲ್ಲಿ ಹೆಸರುವಾಸಿಯಾಗಿರುವ “ಎಸ್‌ಎಲ್‌ವಿ ಬುಕ್‌ ಹೌಸ್‌”ನ ವಿಶೇಷ ಮಳಿಗೆ ಮಂಗಳೂರಿನ ಬಿಜೈನಲ್ಲಿ ಶುಭಾರಂಭಗೊಂಡಿತು.

ಬಿಜೈ ಚರ್ಚ್‌ನ ಮುಂಬಾಗದಲ್ಲಿ ಎಸ್‌ಎಲ್‌ವಿ ಸಂಸ್ಥೆಯ ಪ್ರಧಾನ ಮಳಿಗೆ ಇದ್ದು,  ಒಂದನೇ ಮಹಡಿಯಲ್ಲಿ ಗಿಫ್ಟ್‌ ಐಟಮ್‌ ಹಾಗೂ ಎಲ್ಲಾ ಪುಸ್ತಕಗಳು ಒಂದೇ ಸೂರಿನಡಿಯಲ್ಲಿ ಸಿಗುವಂತೆ ನೂತನ ಮಳಿಗೆ ಜುಲೈ 12 ಶನಿವಾರ ಪೂಜಾ ವಿಧಿ ವಿಧಾನಗಳೊಂದಿಗೆ ಶುಭಾರಂಭಗೊಂಡಿತು.

ಬೆಳಿಗ್ಗೆ ಗಣಪತಿ ಹವನ ಮತ್ತು ಲಕ್ಷ್ಮೀ ಪೂಜೆ ನಡೆದು ಬಳಿಕ ಗಣ್ಯರಾದ  ಶ್ರೀಧರ ಶೆಟ್ಟಿ ಗುಬ್ಯ ಮೇಗಿನಗುತ್ತು ಇವರು ನೂತನ ಮಳಿಗೆಯನ್ನು ಪ್ರಥಮ ಖರೀದಿಯ ಮೂಲಕ ಉದ್ಘಾಟಿಸಿ ನೂತನ ಮಳಿಗೆಗೆ ಶುಭಹಾರೈಸಿದರು.

SLV

ಸಂಸ್ಥೆಯ ಮಾಲಕರಾದ ದಿವಾಕರ್‌ ದಾಸ್‌ ನೇರ್ಲಾಜೆ ಮತ್ತು ಹೇಮಾವತಿ ದಿವಾಕರ್‌ ದಾಸ್‌ ಬಂದ ಅತಿಥಿಗಳನ್ನು ಮತ್ತು ಗ್ರಾಹಕರನ್ನು ಸ್ವಾಗತಿಸಿದರು.

ರಾಜ್ಯಾದ್ಯಾಂತ ಪುಸ್ತಕ ವ್ಯಾಪಾರದಲ್ಲಿ ಮತ್ತು ಪುಸ್ತಕ ಮಳಿಗೆಯಲ್ಲಿ ಹೆಸರುವಾಸಿಯಾಗಿರುವ ಎಸ್‌ಎಲ್‌ವಿ ಸಂಸ್ಥೆಯು ರಾಜ್ಯದ ಬೆಂಗಳೂರು, ಮೈಸೂರು, ಚಾಮರಾಜನಗರ, ಮಂಗಳೂರು, ಮೂಡಬಿದಿರೆ ಹೀಗೆ ಅನೇಕ ಶಾಖೆಗಳನ್ನು ಹೊಂದಿದೆ. ಮಂಗಳೂರಿನಲ್ಲಿ ಬಿಜೈ, ಮಾರ್ನೆಮಿಕಟ್ಟೆ, ಮೇರಿಹಿಲ್‌, ಕೊಡಿಯಲ್‌ಬೈಲ್‌ನಲ್ಲಿ ತನ್ನ ಶಾಖೆಗಳೊಂದಿಗೆ  ಬುಕ್‌ಹೌಸ್‌ನ ಮಳಿಗೆ ಇದ್ದು ಗ್ರಾಹಕರ ಮೆಚ್ಚುಗೆಗೆ ಪಾತ್ರರಾಗಿದೆ.

ಶುಭಾರಂಭ ಕಾರ್ಯಕ್ರಮದಲ್ಲಿ ರಘುರಾಮ ದಾಸ್, ರಾಮ್‌ದಾಸ್‌ ಶೆಟ್ಟಿ ವಿಟ್ಲ, ಚಂದ್ರಕಾಂತ್‌ ಬೆಂಗಳೂರು, ಉದ್ಯಮಿ ಸದಾಶಿವ ದಾಸ್‌‌‌, ಕಟ್ಟಡದ ಮಾಲಕರಾದ ಡಾ. ಶಶಿಕಾಂತ ತಿವಾರಿ, ಪುಷ್ಪಾವತಿ ದಾಸ್, ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರಾದ ರಾಜ ಅಂಚನ್, ದಿನೇಶ್‌ ದಾಸ್‌,  ಯೋಗೀಶ್‌ ನೇರ್ಲಾಜೆ, ವಜ್ರೇಶ್ವರಿ, ಸವಿತಾ, ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!