ಗೋಳ್ತಮಜಲು ಜೆಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕ-ರಕ್ಷಕ ಸಂಘದ ಸಭೆ: ಮಕ್ಕಳಿಗೆ ಹೆತ್ತವರ ಮೌನದ ನೋಟ ಪರಿಣಾಮ ಬೀರಲಿದೆ: ವಂದನಾ ರೈ
ವಿಟ್ಲ: ಪ್ರತಿಯೊಬ್ಬ ಹೆತ್ತವರು ಮಕ್ಕಳನ್ನು ಗದರಿಸಿ, ಹೆದರಿಸಿ ಸರಿಪಡಿಸುವ ಬದಲು ಕಣ್ಣಿನ ಮೌನದ ನೋಟ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂದು ಕಾರ್ಕಳದ ಖ್ಯಾತ ನ್ರತ್ಯ ಶಿಕ್ಷಕಿ ವಂದನಾ ರೈ ಅಭಿಪ್ರಾಯಪಟ್ಟರು.
ಅವರು ಇಂದು ಗೋಳ್ತಮಜಲು ಜೆಮ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ರಕ್ಷಕ ಸಂಘದ ಸಭೆಯಲ್ಲಿ ಮಾತನಾಡುತ್ತಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ಫಾತಿಮಾ ಮೆಮೊರಿಯಲ್ ಎಜುಕೇಶನ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಮಹಮ್ಮದ್ ಹನೀಫ್ ವಹಿಸಿದ್ದರು. ವೇದಿಕೆಯಲ್ಲಿ ಸಂಚಾಲಕರಾದ ಅಹ್ಮದ್ ಮುಸ್ತಫ, ಶಿಕ್ಷಕ ರಕ್ಷಕ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಹಮೀದ್ ಅಲಿ, ಉಪಾಧ್ಯಕ್ಷರಾದ ಪುಷ್ಪ ಸತೀಶ್, ಧರ್ಮ ಗುರುಗಳಾದ ಶೇಕ್ ಮೊಹಮ್ಮದ್ ಇರ್ಪಾನಿ, ಸಲಹೆಗಾರರಾದ ಅಬ್ದುಲ್ ಹಮೀದ್ ಗೋಳ್ತಮಜಲ್, ಟ್ರಸ್ಟಿ ಅಲ್ತಾಫ್ ಅಹ್ಮದ್, ಮುಖ್ಯೋಪಾಧ್ಯಾಯರಾದ ನಿರಂಜನ್ ಡಿ ಉಪಸ್ಥಿತರಿದ್ದರು.
ಸಹಶಿಕ್ಷಕಿ ಝಕೀಯ ಸ್ವಾಗತಿಸಿದರು, ಪ್ರಿಯದರ್ಶಿನಿ ವಂದಿಸಿದರು, ಪಲ್ಲವಿ. ಕೆ, ಕಾರ್ಯಕ್ರಮ ನಿರೂಪಿಸಿದರು. ಜ್ಯೋತಿ 10ನೇ ತರಗತಿ ವಿದ್ಯಾರ್ಥಿಗಳ ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು.




