ರಾಜ್ಯಮಟ್ಟದ ಟೆನಿಸ್ ಆಟಗಾರ್ತಿಯನ್ನೇ ಗುಂಡು ಹಾರಿಸಿ ಕೊಂದ ತಂದೆ
ಗುರುಗ್ರಾಮ: ತನ್ನ ಮಗಳ ಬಗ್ಗೆ ತನ್ನ ಹಳ್ಳಿಯಲ್ಲಿ ಆಡಿಕೊಳ್ಳುತ್ತಿರುವ ಮಾತಿನಿಂದ ನೊಂದ ಅಪ್ಪ ತನ್ನ ಮಗಳನ್ನು ಆಕೆ ಅಡುಗೆ ಮಾಡುತ್ತಿರುವ ವೇಳೆ ಹಿಂದಿನಿಂದ ಗುಂಡು ಹಾರಿಸಿ ಕೊಂದ ಘಟನೆ ಗುರುವಾರ ಬೆಳಿಗ್ಗೆ ಗುರುಗ್ರಾಮ್‌ನಲ್ಲಿರುವ ಅವರ ಮನೆಯಲ್ಲಿ ನಡೆದಿದೆ.
ಮೃತಳನ್ನು 25 ವರ್ಷದ ರಾಜ್ಯಮಟ್ಟದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಎಂದು ಗುರುತಿಸಲಾಗಿದೆ. ಅಡುಗೆ ಮಾಡುತ್ತಿದ್ದ ಮಗಳ ಮೇಲೆ ತಂದೆ ಹಿಂದಿನಿಂದ ಬಂದು ಗುಂಡು ಹಾರಿಸಿದ್ದು, ಆಕೆ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಗಳನ್ನು ಹತ್ಯೆಗೈದ ದೀಪಕ್ ಯಾದವ್(49) ಎಂಬಾತನನ್ನು ಬಂಧಿಸಲಾಗಿದೆ. ಆತನ ಬಳಿ ಇದ್ದ ಪರವಾನಗಿ ಪಡೆದ ಪಿಸ್ತೂಲ್ ವಶಪಡಿಸಿಕೊಂಡಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಪೊಲೀಸ್ ಮಾಹಿತಿಗಳ ಪ್ರಕಾರ ತನ್ನ ಮಗಳು ಸಾಮಾಜಿಕ ಮಾಧ್ಯಮದಲ್ಲಿ ರೀಲ್ಸ್ ಗಳನ್ನು ಮಾಡುವುದರಿಂದ ಅವರು ಅಸಮಾಧಾನಗೊಂಡಿದ್ದರು ಎಂದು ಹೇಳಲಾಗಿದೆ. ಸೆಕ್ಟರ್ 57 ರಲ್ಲಿರುವ ಅವರ ಮನೆಯ ಮೊದಲ ಮಹಡಿಯಲ್ಲಿ ಬೆಳಿಗ್ಗೆ 10.30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಆರೋಪಿ ತಂದೆ ರಾಧಿಕಾ ಮೇಲೆ ಮೂರು ಗುಂಡುಗಳನ್ನು ಹಾರಿಸಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು ಆದರೆ ಚಿಕಿತ್ಸೆಯ ಸಮಯದಲ್ಲಿ ಅವರು ಸಾವನ್ನಪ್ಪಿದರು.





