March 13, 2026

ಪತ್ನಿ ಶಾಪಿಂಗ್ ಹೋಗಿದ್ದಕ್ಕೆ ಆಕೆಯ ಕುತ್ತಿಗೆಗೆ ಕಾಲಿನಿಂದ ತುಳಿದು ಕೊಲೆಗೈದ ಪತಿ

0
image_editor_output_image-1262270956-1752130948851.jpg

ಬೆಂಗಳೂರು: ದಂಪತಿಯ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ಪತ್ನಿ ಶಾಪಿಂಗ್ ಹೋಗಿದ್ದಕ್ಕೆ ಆಕೆಯ ಕುತ್ತಿಗೆಗೆ ಕಾಲಿನಿಂದ ತುಳಿದು ಪತಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ.

ಶ್ರೀನಿವಾಸಪುರ ಮೂಲದ ಪದ್ಮಜಾ (29) ಕೊಲೆಯಾದ ಪತ್ನಿ. ಪತಿ ಹರೀಶ್ ಕೊಲೆ ಮಾಡಿದ ಆರೋಪಿ. ಬಿಇ ವ್ಯಾಸಾಂಗ ಮುಗಿಸಿದ್ದ ದಂಪತಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದರು.

ಕೆಲ ತಿಂಗಳಿಂದ ಆರೋಪಿ ಹರೀಶ್ ಕೆಲಸ ಬಿಟ್ಟಿದ್ದ. ಅಲ್ಲದೇ ಪತ್ನಿಯ ಜೊತೆ ಸಾಂಸಾರಿಕ ಜೀವನ ನಡೆಸದೆ ಪ್ರತಿದಿನ ಗಲಾಟೆ ಮಾಡ್ತಿದ್ದ. ಜೂ. 7ರಂದು ಪದ್ಮಜಾ, ಶಾಪಿಂಗ್ ಹೋಗಿದ್ದ ವಿಚಾರವಾಗಿ ಹರೀಶ್ ಮನೆಯಲ್ಲಿ ಗಲಾಟೆ ತೆಗೆದಿದ್ದ. ಗಲಾಟೆ ವೇಳೆ ಪತ್ನಿಯ ಕುತ್ತಿಗೆ ಹಿಸುಕಿ ಹಲ್ಲೆ ಮಾಡಿದ ಬಳಿಕ ನೆಲಕ್ಕೆ ಬೀಳಿಸಿ ಪದ್ಮಜಾ ಕುತ್ತಿಗೆ ಮೇಲೆ ಕಾಲಿಟ್ಟು ತುಳಿದು ಕೊಲೆ ಮಾಡಿದ್ದ.

ಇದಾದ ಬಳಿಕ ಜು. 7ರಂದು ರಾತ್ರಿ ಸಹಜ ಸಾವಾಗಿದೆ ಎಂದು ಬೊಮ್ಮನಹಳ್ಳಿ ಪೊಲೀಸರು ಕರೆ ಬಂದಿತ್ತು. ವಿಚಾರ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಸ್ಥಳೀಯರ ವಿಚಾರಣೆ ನಡೆಸಿದ್ದರು. ಈ ವೇಳೆ ಸ್ಥಳೀಯರು, ಗಂಡ ಹೆಂಡತಿ ನಡುವೆ ತಡರಾತ್ರಿ ಜಗಳ ಆಗಿದ್ದ ಬಗ್ಗೆ ತಿಳಿಸಿದ್ದರು

Leave a Reply

Your email address will not be published. Required fields are marked *

error: Content is protected !!