September 22, 2026

ಬಂಟ್ವಾಳ: ಹೈಕೋರ್ಟ್ ನ ಬಿಡಿಎ ಪ್ಯಾನಲ್ ವಕೀಲರಾಗಿ ರಿಯಾಝ್ ಬಂಟ್ವಾಳ ನೇಮಕ

0
IMG-20250705-WA0018.jpg

ಬಂಟ್ವಾಳ: ಹೈಕೋರ್ಟ್ ನ ಬಿಡಿಎ ಪ್ಯಾನಲ್ ವಕೀಲರಾಗಿ ರಿಯಾಝ್ ಬಂಟ್ವಾಳ ನೇಮಕಗೊಂಡಿದ್ದಾರೆ. ಬಿಡಿಎ ಅಧ್ಯಕ್ಷ ಎನ್.ಎ.ಹಾರಿಸ್ ರವರು ನೇಮಕ ಆದೇಶ ಪತ್ರವನ್ನು ರಿಯಾಝ್ ಅವರಿಗೆ ತಮ್ಮ ಕಚೇರಿಯಲ್ಲಿ ನೀಡಿದರು.

ವಕೀಲ ರಿಯಾಝ್ ಕಳೆದ 25 ವರ್ಷಗಳಿಂದ ಕಾನೂನು ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಸಾಮಾಜಿಕ ಸಮಸ್ಯೆಗಳ ವಿಷಯಗಳಲ್ಲಿ ಯಾವಾಗಲೂ ಮುಂಚೂಣಿಯಲ್ಲಿದ್ದಾರೆ, ಇದಲ್ಲದೆ ಅವರು ಅನೇಕ ಸಾಮಾಜಿಕ ರಂಗಗಳ ಅಧ್ಯಕ್ಷತೆಯನ್ನು ವಹಿಸಿದ್ದಾರೆ.

 

ಇವರು ಮೂಲತಃ ಬಂಟ್ವಾಳದವರಾಗಿದ್ದರೂ, ಕಳೆದ 25 ವರ್ಷಗಳಿಂದ ಬೆಂಗಳೂರು ಹೈಕೋರ್ಟ್ ಮತ್ತು ಇತರ ನ್ಯಾಯಾಲಯಗಳಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ.

ಇದಲ್ಲದೆ ಅವರು ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಕಾನೂನು ಸಮಿತಿಯ ಸಲಹೆಗಾರರೂ ಮತ್ತು ಕೆಎಸ್‌ಆರ್‌ಟಿಸಿ ಸಮಿತಿಯ ವಕೀಲರೂ ಆಗಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!