September 22, 2026

ಕರ್ನಾಟಕ ಭಾವೈಕ್ಯ ಪರಿಷತ್ ವತಿಯಿಂದ ಕವಿಗೋಷ್ಠಿ

0
IMG-20250705-WA0019.jpg

ವಿಟ್ಲ: ವಿವಿಧ ಸಮಾಜಗಳನ್ನು ಒಗ್ಗೂಡಿಸುವ ಅದ್ಭುತ ಸಾಮರ್ಥ್ಯ ಸಾಹಿತ್ಯ ಕ್ಷೇತ್ರಕ್ಕಿದ್ದು, ನಾಡಿನ ಅಮೂಲ್ಯ ಸೊತ್ತುಗಳಾಗಿರುವ ಕವಿಗಳು, ಲೇಖಕರು ಸಾಮರಸ್ಯ ಸಮಾಜ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದಾರೆಂದು ಕರ್ನಾಟಕ ಭಾವೈಕ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಇಖ್ಬಾಲ್ ಬಾಳಿಲ ಹೇಳಿದರು.

ಕರ್ನಾಟಕ ಭಾವೈಕ್ಯ ಪರಿಷತ್ ವತಿಯಿಂದ ನಡೆದ ಆನ್‌ಲೈನ್‌ ಕವಿಗೋಷ್ಠಿ ಹಾಗೂ ಭಾವೈಕ್ಯ ವಿಚಾರ ಗೋಷ್ಠಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

 

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಅಬೂಬಕರ್ ಅನಿಲಕಟ್ಟೆ‌ ವಿಟ್ಲ‌,ಪ್ರಾಸ್ತಾವಿಕ ಭಾಷಣ ಮಾಡಿದರು.

ಕರ್ನಾಟಕ ಭಾವೈಕ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ, ಸಾಹಿತಿ ಹೆಚ್.ಭೀಮರಾವ್ ವಾಷ್ಠರ್ ಸುಳ್ಯ, ಕವಿಗೋಷ್ಠಿ‌ ಹಾಗೂ ಭಾವೈಕ್ಯ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.

ಎಸ್.ಬಿ.ಮುಹಮ್ಮದ್ ದಾರಿಮಿ‌ ಉಪ್ಪಿನಂಗಡಿ, ಡಿ.ಐ.ಅಬೂಬಕರ್ ಕೈರಂಗಳ, ಖ್ಯಾತ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ, ಸಾಮಾಜಿಕ ಕಾರ್ಯಕರ್ತ ಉಬೈದ್.ಕೆ.ವಿಟ್ಲ,
ಡಿ.ಎ.ಅಬ್ಬಾಸ್ ಪಡಿಕ್ಕಲ್ ಭಾವೈಕ್ಯ ಸಂದೇಶ ನೀಡಿದರು ನೀಡಿದರು.

ಕವಿಗಳಾದ ನಾರಾಯಣ ಕುಂಬ್ರ, ಪೆರುಮಾಳ್ ಐವರ್ನಾಡು, ಹಮೀದ್ ಹಸನ್ ಮಾಡೂರು, ಎ.ಎಸ್.ಬಾವ ಪುತ್ತೂರು, ಎಂ.ಪಿ.ಬಶೀರ್ ಅಹ್ಮದ್ ಬಂಟ್ವಾಳ, ಹೈದರಲಿ ಐವತ್ತೊಕ್ಲು, ಹರೀಶ್ ಸುಲಾಯ ಒಡ್ಡಂಬೆಟ್ಟು, ಅನಾರ್ಕಲಿ ಸಲೀಂ ಮೊದಲಾದವರು ಕವನ ವಾಚನ ಮಾಡಿದರು.
ಹವ್ಯಾಸಿ ಪತ್ರಕರ್ತ ಕೆ.ಎ.ಅಬ್ದುಲ್ ಅಝೀಝ್ ಪುಣಚ ಸ್ವಾಗತಿಸಿದರು.
ಯುವ ಕವಿ ಎಂ.ಎ.ಮುಸ್ತಫಾ ಬೆಳ್ಳಾರೆ ಕಾರ್ಯಕ್ರಮ ನಿರೂಪಣೆ ಮಾಡಿದರು.

Leave a Reply

Your email address will not be published. Required fields are marked *

You may have missed

error: Content is protected !!