September 22, 2026

ಸುಳ್ಯ: 3 ವರ್ಷಗಳಿಂದ ತಲೆಮರೆಸಿಕೊಂಡಿದ್ದ ದರೋಡೆ ಪ್ರಕರಣದ ಆರೋಪಿಯ ಬಂಧನ

0
IMG-20250705-WA0002.jpg

ಸುಳ್ಯ: ಸುಮಾರು 3 ವರ್ಷಗಳಿಂದ ತಲೆಮರೆಸಿಕೊಂಡಿದ್ದ ದರೋಡೆ ಪ್ರಕರಣದ ಆರೋಪಿಯನ್ನು ಸುಳ್ಯ ಪೊಲೀಸರು ಬಂಧನ ಮಾಡಿದ್ದಾರೆ.

ತಮಿಳುನಾಡಿನ ತಿರುವರೂರ್ ನಿವಾಸಿ ಸುಧಾಕರ ಆರ್ಮುಗಮ್ (42) ತಲೆಮರೆಸಿಕೊಂಡಿದ್ದ ಆರೋಪಿ.

 

ದಿನಾಂಕ 20.03.2022 ರಂದು ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸಂಪಾಜೆ ಗ್ರಾಮದ ಚೆಟ್ಟೆಕಲ್ಲು ಎಂಬಲ್ಲಿನ ಮನೆಯೊಂದರಲ್ಲಿ ನಡೆದ ರೂ 1,50,000/- ನಗದು ಹಾಗೂ 01 ಮೊಬೈಲ್ ಫೋನ್ ದರೋಡೆ ಪ್ರಕರಣದಲ್ಲಿ, ತಲೆಮರೆಸಿಕೊಂಡಿದ್ದ ಆರೋಪಿ ತಮಿಳುನಾಡಿನ ತಿರುವರೂರ್ ನಿವಾಸಿ ಸುಧಾಕರ ಆರ್ಮುಗಮ್ (42) ಎಂಬಾತನನ್ನು, ಸುಳ್ಯ ಠಾಣಾ ಪೊಲೀಸರು ದಿನಾಂಕ:04.07.2025 ರಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ದಸ್ತಗಿರಿ ಮಾಡಿ, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

Leave a Reply

Your email address will not be published. Required fields are marked *

You may have missed

error: Content is protected !!