September 22, 2026

ಬೆಳ್ತಂಗಡಿ: ಅಕ್ರಮವಾಗಿ ಜಾನುವಾರಿನ ಮಾಂಸವನ್ನು ಮಾರಾಟ ಮಾಡಲು ಯತ್ನ: 47 ಕೆಜಿ ದನದ ಮಾಂಸ ಮತ್ತು ಇಬ್ಬರು ಆರೋಪಿಗಳು ವಶಕ್ಕೆ

0
IMG-20250705-WA0017.jpg

ಬೆಳ್ತಂಗಡಿ: ಮಿತ್ತಬಾಗಿಲು ಗ್ರಾಮದ ಕಾಜೂರು ಎಂಬಲ್ಲಿ ಯಾವುದೇ ಪರವಾನಿಗೆ ಹೊಂದದೇ ಅಕ್ರಮವಾಗಿ ಜಾನುವಾರಿನ ಮಾಂಸವನ್ನು, ಮಾರಾಟ ಮಾಡುವ ಉದ್ದೇಶದಿಂದ ಅಂಗಡಿಯೊಳಗೆ ಶೇಖರಿಸಿಟ್ಟಿರುವ ಬಗ್ಗೆ ಮಾಹಿತಿ ದೊರೆತ ಮೇರೆಗೆ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ ಘಟನೆ ಜು. 2ರಂದು ನಡೆದಿದೆ.

ಘಟನೆ ವಿವರ: ಮಿತ್ತಬಾಗಿಲು ಗ್ರಾಮದ ಕಾಜೂರು ಎಂಬಲ್ಲಿ, ಆರೋಪಿತನಾದ ಮಲವಂತಿಗೆ ನಿವಾಸಿ ಅಬ್ದುಲ್ ರಜಾಕ್ (28), ಎಂಬಾತನು ಬೆಳ್ತಂಗಡಿ ಎಂಬವರಿಗೆ ಸಂಬಂಧಪಟ್ಟ ಅಂಗಡಿಯಲ್ಲಿ, ಯಾವುದೇ ಪರವಾನಿಗೆ ಹೊಂದದೇ ಅಕ್ರಮವಾಗಿ ಜಾನುವಾರಿನ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ಅಂಗಡಿಯೊಳಗೆ ಶೇಖರಿಸಿಟ್ಟಿರುವ ಬಗ್ಗೆ ಮಾಹಿತಿ ದೊರೆತ ಮೇರೆಗೆ, ಯಲ್ಲಪ್ಪ ಹೆಚ್ ಮಾದರ, ಪೊಲೀಸು ಉಪ-ನಿರೀಕ್ಷಕರು ಬೆಳ್ತಂಗಡಿ ಪೊಲೀಸ್‌ ಠಾಣೆರವರು ಸಿಬ್ಬಂದಿಗಳೊಂದಿಗೆ ತೆರಳಿ ಪರಿಶೀಲಿಸಿದಾಗ, ಒಟ್ಟು 47 ಕೆಜಿ ದನದ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ಅಂಗಡಿಯೊಳಗೆ ಪ್ರಿಡ್ಜ್ ನೊಳಗೆ ಇರಿಸಿರುವುದು ಕಂಡುಬಂದಿರುತ್ತದೆ.

 

ಸದ್ರಿ ಸೊತ್ತುಗಳನ್ನು ಮುಂದಿನ ಕಾನೂನುಕ್ರಮಕ್ಕಾಗಿ ಸ್ವಾಧೀನಪಡಿಸಿ, ಆರೋಪಿತರಾದ ಅಬ್ದುಲ್ ರಜಾಕ್ ಹಾಗೂ ಅಂಗಡಿಯಲ್ಲಿದ್ದ ಮತ್ತೋರ್ವ ಆರೋಪಿತ ಅಬ್ದುಲ್ ರವೂಪ್ (20) ಎಂಬವರ ವಿರುದ್ಧ ಜು.02 ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ: 51/2025, ಕಲಂ: 4, 12 ಕರ್ನಾಟಕ ಗೋವಧೆ ಪ್ರತಿಬಂದಕ ಮತ್ತು ಜಾನುವಾರು ಸಂರಕ್ಷಣಾ ಅಧಿನಿಯಮ 2020 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *

You may have missed

error: Content is protected !!