ಬೆಳ್ತಂಗಡಿ: ಹೆದ್ದಾರಿ ಬದಿಯ ಹಳ್ಳಕ್ಕೆ ಉರುಳಿ ಬಿದ್ದ ಕಾರು
ಬೆಳ್ತಂಗಡಿ: ಮಂಗಳೂರು – ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿಯ ಕಲ್ಮಂಜ ಗ್ರಾಮದ ನಿಡಿಗಲ್‌ನಲ್ಲಿ ಬುಧವಾರ ರಾತ್ರಿ ಹೆದ್ದಾರಿ ಬದಿಯ ಹಳ್ಳಕ್ಕೆ ಕಾರೊಂದು ಉರುಳಿ ಬಿದ್ದಿದೆ.
ಚಾಲಕ ಗುರಿಪ್ಪಳ್ಳ ಕಡೆಯ ಶೇಖರ ಅವರು ರಸ್ತೆ ಬದಿ ಕಾರನ್ನು ನಿಲ್ಲಿಸಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ವೇಳೆ ರಸ್ತೆ ಬದಿಯ ಮಣ್ಣು ಏಕಾಏಕಿ ಕುಸಿದು ಕಾರು ಚಾಲಕನ ಸಹಿತ ಸುಮಾರು 20 ಅಡಿಗಿಂತ ಹೆಚ್ಚಿನ ಆಳದ ಹಳ್ಳಕ್ಕೆ ಜಾರಿ ಅಡಿಮೇಲಾಗಿ ಬಿದ್ದಿತು.
ಚಾಲಕ ಅಪಾಯದಿಂದ ಪಾರಾಗಿದ್ದು ಕಾರಿಗೆ ಹಾನಿಯಾಗಿದೆ. ಸ್ಥಳೀಯರು ಧಾವಿಸಿ ಕಾರು ಚಾಲಕನನ್ನು ರಕ್ಷಿಸಿ ಕಾರನ್ನು ಮೇಲಕ್ಕೆ ತರಲು ಸಹಕರಿಸಿದರು.




