March 13, 2026

ಸೀರೆಯುಟ್ಟು ಹೆಣ್ಣಿನ ವೇಷದಲ್ಲಿ ದೇವಾಲಯದಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಯ ಬಂಧನ

0
image_editor_output_image288750175-1751434076976.jpg

ರಾಮನಗರ: ಕಳ್ಳತನ ಮಾಡಿ ತಗಲಾಕಿಕೊಳ್ಳಬಾರದು ಎಂದು ಖದೀಮರು ಒಂದಲ್ಲೊಂದು ಉಪಾಯ ಹುಡುಕುತ್ತಿರುತ್ತಾರೆ. ಆದರೆ ಇಲ್ಲೊಬ್ಬ ಖತರ್ನಾಕ್ ಕಳ್ಳ ಸೀರೆಯುಟ್ಟು ಹೆಣ್ಣಿನ ವೇಷದಲ್ಲಿ ಬಂದು ದೇವಾಲಯದಲ್ಲಿ ಕಳ್ಳತನಕ್ಕೆ ಯತ್ನಿಸಿ, ಪೊಲೀಸರ ಅತಿಥಿಯಾಗಿರುವ ಘಟನೆ ಚನ್ನಪಟ್ಟಣ ತಾಲೂಕಿನ ಮಣ್ಣಿಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮಣ್ಣಿಗನಹಳ್ಳಿ ಗ್ರಾಮದ ಶಶಿ ಬಂಧಿತ ಆರೋಪಿ. ಈತ ಪೊಲೀಸರಿಗೆ ಸುಳಿವು ಸಿಗಬಾರದು ಎಂದು ಉಪಾಯ ಮಾಡಿ ಸೀರೆಯುಟ್ಟು ಕಳ್ಳತನ ಮಾಡಲು ಮುಂದಾಗಿದ್ದ. ಇದನ್ನೂ ಓದಿ: ಶಿವಮೊಗ್ಗ | ಎರಡೇ ದಿನದಲ್ಲಿ ಹೃದಯಾಘಾತಕ್ಕೆ ನಾಲ್ವರು ಬಲಿ

ಆರೋಪಿಯು ಸೀರೆಯುಟ್ಟು ಗ್ರಾಮದ ಶನೇಶ್ವರ ದೇವಾಲಯದಲ್ಲಿ ಕಳ್ಳತನ ಮಾಡಲು ಬಂದಿದ್ದ. ಕಬ್ಬಿಣದ ಸಲಾಕೆಯಿಂದ ದೇವಾಲಯ ಬಾಗಿಲು ಮುರಿಯಲು ಯತ್ನಿಸಿ, ಸಾಧ್ಯವಾಗದಿದ್ದಾಗ ಕಿಟಕಿಗಳನ್ನು ಮುರಿಯಲು ಯತ್ನಿಸಿ ವಿಫಲನಾಗಿ ಹಿಂದಿರುಗಿದ್ದ.

ಕಳ್ಳತನಕ್ಕೆ ಯತ್ನಿಸಿದ ದೃಶ್ಯ ದೇವಾಲಯದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಘಟನಾ ಸಂಬಂಧ ದೇವಾಲಯದ ಆಡಳಿತ ಮಂಡಳಿಯವರು ಅಕ್ಕೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸಿಸಿ ಕ್ಯಾಮೆರಾ ದೃಶ್ಯದ ಆಧಾರದ ಮೇಲೆ ಆರೋಪಿಯನ್ನು ಅಕ್ಕೂರು ಪೊಲೀಸರು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!