ಮೊದಲ ಬಾರಿಗೆ ಶತಕ ಸಮೀಪಿಸಿದ ತೆಂಗಿನಕಾಯಿ ದರ
ಬೆಂಗಳೂರು: ಇತಿಹಾಸದಲ್ಲೇ ಮೊದಲ ಬಾರಿಗೆ ತೆಂಗಿನಕಾಯಿ ದರ ಶತಕ ಸಮೀಪಿಸಿದ್ದು, ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿದೆ.
ಸಾಮಾನ್ಯವಾಗಿ ಒಂದು ಕೆ.ಜಿ ತೆಂಗಿನಕಾಯಿಗೆ 30 ರೂ. ಆಸುಪಾಸಿನಲ್ಲಿರುತ್ತಿತ್ತು. ಆದರೆ ಇದೀಗ ದ್ವಿಗುಣಗೊಂಡಿದ್ದು, ಒಂದು ಕೆ.ಜಿಗೆ ಬರೋಬ್ಬರಿ 70-80 ರೂ.ಗೆ ತಲುಪಿದೆ. ಒಂದೆಡೆ ತೆಂಗು ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದ್ದು, ಇನ್ನೊಂದೆಡೆ ಜನ ಸಾಮಾನ್ಯರಿಗೆ ಹೊರೆಯಾಗಿದೆ.
ಇನ್ನೂ ತೆಂಗಿನಕಾಯಿ ಜೊತೆ ಕೊಬ್ಬರಿ, ಕೊಬ್ಬರಿ ಎಣ್ಣೆ, ಎಳನೀರು ದರದಲ್ಲೂ ಭಾರೀ ಏರಿಕೆಯಾಗಿದೆ. ಶುದ್ಧ ಕೊಬ್ಬರಿ ಎಣ್ಣೆ ಲೀಟರ್‌ಗೆ 310 ರೂ. ಆದರೆ, ಎಳನೀರು ಒಂದಕ್ಕೆ 70 ರೂ.ಯಾಗಿದೆ. ಈ ಮೂಲಕ ಹಿಂದೆಂದಿಗಿಂತಲೂ ಈ ಸಲ ಭಾರೀ ಏರಿಕೆಯಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.





