ವಿಟ್ಲ: ಹೊರೈಝನ್ ಸ್ಕೂಲ್ ನಲ್ಲಿ ಎಸ್.ಎಸ್.ಎಲ್.ಸಿ ಟಾಪರ್ ಗೆ ಚಿನ್ನದ ನಾಣ್ಯ ಪ್ರದಾನ
ವಿಟ್ಲ: ಹೊರೈಝನ್ ಪಬ್ಲಿಕ್ ಸ್ಕೂಲ್ ವಿಟ್ಲದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಶಾಲಾ ಟಾಪರ್ ಆಗಿ ಹೊರಹೊಮ್ಮಿದ ಆಯಿಷತುಲ್ ಹಝೀಮ ಶಾಲಾ ಅಧ್ಯಕ್ಷರಾದ ಅಬ್ದುಲ್ ಅಝೀಝ್ ರವರಿಂದ ಚಿನ್ನದ ಪದಕವನ್ನು ಸ್ವೀಕರಿಸಿದಳು.
ಎಸ್. ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹಾಗೂ ಸಮಸ್ತ ಮದರಸ ಪಬ್ಲಿಕ್ ಪರೀಕ್ಷೆಯಲ್ಲಿ ಉನ್ನತ ದರ್ಜೆ ಪಡೆದ ಎಲ್ಲಾ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಮುಖ್ಯೋಪಾಧ್ಯಾಯರಾದ ಮನಾಝಿರ್ ಮುಡಿಪು ಪ್ರಸ್ತಾವನೆಗೈದರು. ಶಾಲೆಯ ಪ್ರ.ಕಾರ್ಯದರ್ಶಿಗಳಾದ ಅಬೂಬಕರ್ ನೋಟರಿ ವಕೀಲರು ವಿಟ್ಲ ಶುಭ ಹಾರೈಸಿದರು.
ವೇದಿಕೆಯಲ್ಲಿ ಶಾಲಾ ಆಡಳಿತ ಸಮಿತಿಯ ಪದಾಧಿಕಾರಿಗಳು, ಜಮಾಅತ್ ಸಮಿತಿಯ ಪದಾಧಿಕಾರಿಗಳು ಹಾಗೂ ಟ್ರಸ್ಟ್ ಸದಸ್ಯರು ಉಪಸ್ಥಿತರಿದ್ದರು. ಶಾಲಾ ಅಧ್ಯಾಪಕರು ಸಹಕರಿಸಿದರು.





