December 15, 2025

ಅಂಟಿಲ್ಲದ ಬದುಕಿನಿಂದ ನೆಂಟನಾಗಿ ಸಾಗಿದ – ಯಲ್. ಯನ್. ಕೂಡೂರು: ಬರಹ: ರಾಧಾಕೃಷ್ಣ ಎರುಂಬು

0
image_editor_output_image-1211914593-1751255275695

ಮನುಷ್ಯ ಎಷ್ಟು ಕಾಲ ಬದುಕಿದ ಎನ್ನುವುದಕ್ಕಿಂತಲೂ ಹೇಗೆ ಬದುಕಿದ ಎನ್ನುವುದೇ ಗಮನಾರ್ಹ. ಬದುಕಿದ 66 ವರುಷ  ಅರೆಗಳಿಗೆಯ ವರ್ಷಧಾರೆಯಂತೆ ಹರಿದು ಹೋಗಿ ಅಂಟಿಲ್ಲದ ಬದುಕು ಮುಗಿಸಿ ಸಾಗಿಸಿದವರು.

ಆಗಲಿ ಹೋಗಿ ವರ್ಷ ಸoದರೂ ಮಾಸದ ಅವರ ಬದುಕಿನ ಚಿತ್ರಣ ನೆನೆಗುದಿಗೆ ಸೇರದ ಆ ಆಸಾದಾರಣ ವ್ಯಕ್ತಿತ್ವದ ನoಟಿರುವ ಪ್ರತಿಯೊರ್ವನ ಮನಸ್ಸಿನಲ್ಲೂ ಪ್ರತಿಮೆಯಾಗಿ ಉಳಿದಿರುವುದೇ ಅವರ ಜೇಷ್ಠ ತನ

ಅಪರಿಮಿತ ಉದ್ದಿಮೆದಾರರು, ದುಡಿದ ಸಹಕಾರಿ ಕ್ಷೇತ್ರಗಳು, ಅತಿ ಹಂಬಲದಿಂದ ಸೃಜಿಸಿದ ಶಿಕ್ಷಣ ಸಂಸ್ಥೆಯ ಪುಟಾಣಿ ಹೃದಯಗಳು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಟ್ಟಿ ನಿಂತರೂ ಕೂಡೂರುರವರು ಬೆನ್ನು ತಟ್ಟಿದ ಸಣ್ಣ ಏಟು ಮಾಸಿಲ್ಲದ ನೆನಪಲ್ಲೂ ಏನೋ ಒಂದು ಸುಖವಿದೆ. ಅಂದು ಅವರು ಬಿತ್ತಿದ ಬೀಜ ಇಂದು ಹೆಮ್ಮರವಾಗಿ ಬೆಳೆದಿದ್ದರೆ, ಅವರ ದೂರದರ್ಶಿತ್ವದ ಪ್ರಭಾವ ಪರಿಣಾಮಕರ ಪ್ರಭಾವವೇ ಸರಿ. ಬದುಕಿನಲ್ಲಿ ಸಂಸಾರಿಕ ಬಂಧನಕ್ಕೂ ಸಿಲುಕದೆ, ಎಲ್ಲಾ ಕ್ಷೇತ್ರಗಳಲ್ಲೂ ಯಾರೊಂದಿಗೂ ತೃಣವಾಗದೆ, ಏರಿದ ಮೆಟ್ಟಲಿಗೆ ಕುಂದು ಬಾರದಂತೆ ಬದುಕಿದ ನಾಯಕತ್ವ ಎಲ್ಲರಿಗೂ ಮಾದರಿಯಾಗಿದ್ದರೂ ಸದ್ರಿ ನೆಂಟನಾಗಿಯೇ ಈ ಜಗದ ಜಂಜಾಟದಿಂದ ದೂರ ಸಾಗಿದ ಚೇತನಕ್ಕೆ ವರ್ಷದ ನಮನ.

ರಾಧಾಕೃಷ್ಣ ಎರುಂಬು

Leave a Reply

Your email address will not be published. Required fields are marked *

You may have missed

error: Content is protected !!