March 13, 2026

ಪುತ್ತೂರು: ಆಟೋ ರಿಕ್ಷಾ ಮತ್ತು ಬೈಕ್ ನಡುವೆ ಅಪಘಾತ: ಉರೂಸ್ ಕಾರ್ಯಕ್ರಮ ಮುಗಿಸಿ ಹಿಂತಿರುಗುತ್ತಿದ್ದ  ಸಾಲೆತ್ತೂರು ಮೂಲದ ಮಗು ಸಹಿತ ಹಲವರಿಗೆ ಗಾಯ

0
image_editor_output_image-1462845328-1751203760912

ಪುತ್ತೂರು: ಉರ್ಲಾಂಡಿ ಬೈಪಾಸ್ ರಸ್ತೆ ಬಳಿ ಆಟೋ ರಿಕ್ಷಾ ಹಾಗೂ ಬೈಕ್ ಗಳ ನಡುವೆ ಅಪಘಾತವಾಗಿದ್ದು, ಮಗು ಸಹಿತ 4 ಮಂದಿಗೆ ಗಂಭೀರ ಗಾಯಗೊಂಡ ಘಟನೆ ಜು.29ರ ಸಂಜೆ ನಡೆದಿದೆ.

ರಿಕ್ಷಾದಲ್ಲಿದ್ದ ಸಾಲೆತ್ತೂರು ಮೂಲದ ಮೊಹಮ್ಮದ್ ತಮೀಮ್ (5), ಹಮೀದ್ (40), ಇಸ್ಮಾಯಿಲ್ (45), ಇಬ್ರಾಹಿಂ (65), ಸಮೀರ್ (34), ಸುಲೈಮಾನ್ (26) ಹಾಗೂ , ಸ್ಥಳೀಯ ಸ್ಟುಡಿಯೋವೊಂದರಲ್ಲಿ ಕಾರ್ಯನಿರ್ವಹಿಸುವ ಬೈಕ್ ಸವಾರ ಗಾಯಗೊಂಡವರಾಗಿದ್ದಾರೆ.

ರಿಕ್ಷಾಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಕೀರ್ತನ್ ಅವರು ಬೈಕನ್ನು ಬಲಬದಿಗೆ ಚಲಾಯಿಸಿದ್ದಾರೆ. ದುರದೃಷ್ಟವಶಾತ್, ಅದೇ ಸಮಯದಲ್ಲಿ ಎದುರಿನಿಂದ ಬರುತ್ತಿದ್ದ ಆಟೋರಿಕ್ಷಾಕ್ಕೆ ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಹಾಗೂ ಚಾಲಕ ತಕ್ಷಣ ಬ್ರೇಕ್ ಹಾಕಿದ ಪರಿಣಾಮ, ರಿಕ್ಷಾ ನಿಯಂತ್ರಣ ತಪ್ಪಿ ರಸ್ತೆಯಲ್ಲಿಯೇ ಪಲ್ಟಿಯಾಗಿದೆ.

ಘಟನೆಯ ವಿವರ:
ಸಾಲೆತ್ತೂರು ನಿವಾಸಿಗಳು ಉರೂಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಟೋರಿಕ್ಷಾದಲ್ಲಿ ತಮ್ಮ ಊರಿಗೆ ಹಿಂದಿರುಗುತ್ತಿದ್ದರು. ಇದೇ ವೇಳೆ, ನಗರದಿಂದ ದರ್ಬೆ ಕಡೆಗೆ ತೆರಳುತ್ತಿದ್ದ ಬೈಕ್ ಸವಾರನ ಅವರ ಉರ್ಲಾಂಡಿ ಸಮೀಪದ ಒಳರಸ್ತೆಯಿಂದ ಕಾರೊಂದು ಏಕಾಏಕಿ ಮುಖ್ಯರಸ್ತೆಗೆ ಬಂದಿದೆ.

ಅಪಘಾತದ ರಭಸಕ್ಕೆ ಆಟೋ ರಿಕ್ಷಾ ಪಲ್ಟಿಯಾಗಿದ್ದು, ಗಾಯಾಳುಗಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!