March 13, 2026

ವಿಟ್ಲ: ಟೌನ್ ಮಸೀದಿ ಹೌಳ್ ಉದ್ಘಾಟನೆ

0
IMG-20250627-WA0041

ವಿಟ್ಲ: ಪೇಟೆಯಲ್ಲಿರುವ ಅಶ್ಅರಿಯ್ಯ ಟೌನ್ ಜುಮಾ ಮಸೀದಿಯಲ್ಲಿ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ನಮಾಝ್ ಅಂಗಸ್ನಾನ ವ್ಯವಸ್ಥೆಯ ಹೌಳ್ ನ್ನು ಗುರುವಾರ ಉದ್ಘಾಟಿಸಲಾಯಿತು.

ಟೌನ್ ಮಸೀದಿ ನಿರ್ದೇಶಕರಾದ ಕೆ.ಎ. ಮಹಮೂದುಲ್ ಫೈಝಿ ವಾಲೆಮುಂಡೋವು ಉದ್ಘಾಟಿಸಿದರು. ಮತ್ತೋರ್ವ ನಿರ್ದೇಶಕರಾದ ಕೆ.ಎಂ. ಇಬ್ರಾಹಿಂ ಫೈಝಿ ಕನ್ಯಾನ ದುಆ ನೆರವೇರಿಸಿದರು. ಉಪಾಧ್ಯಕ್ಷ ಮುಹಮ್ಮದಲಿ ಸಖಾಫಿ ಸುರಿಬೈಲು ಆಶಯ ಮಾತುಗಳನ್ನಾಡಿ ಪ್ರಸ್ತಾವನೆಗೈದರು. ಅಧ್ಯಕ್ಷ ಇಬ್ರಾಹಿಂ ಬ್ರೈಟ್ ಅಧ್ಯಕ್ಷತೆ ವಹಿಸಿದರು. ಮಸೀದಿ ಇಮಾಮ್ ಅಬ್ಬಾಸ್ ಮದನಿ ಉಪಸ್ಥಿತರಿದ್ದರು.

ಟೌನ್ ಮಸೀದಿ ಟ್ರಸ್ಟ್ ಸಮಿತಿಯ ಉಪಾಧ್ಯಕ್ಷ ಆರ್.ಕೆ. ಅಬ್ದುಲ್ಲ ಹಾಜಿ, ಕಾರ್ಯದರ್ಶಿ ರಶೀದ್ ವಿಟ್ಲ, ಕೋಶಾಧಿಕಾರಿ ವಿ.ಎಚ್. ಅಶ್ರಫ್, ಜೊತೆ ಕಾರ್ಯದರ್ಶಿ ಇಸ್ಮಾಯಿಲ್ ಅಡ್ಡದಬೀದಿ, ಟ್ರಸ್ಟ್ ಸದಸ್ಯ ಶರೀಫ್ ಫ್ಯಾನ್ಸಿ ಪಾರ್ಕ್, ಮಸೀದಿ ನಿರ್ವಹಣಾ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಶಾಫಿ, ಕಾರ್ಯದರ್ಶಿ ಶಾಕಿರ್ ಅಳಕೆಮಜಲು ಹಾಗೂ ಉಬೈದ್ ವಿಟ್ಲ, ಕೋಶಾಧಿಕಾರಿ ಇಕ್ಬಾಲ್ ಶೀತಲ್ ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!