March 13, 2026

ಜೂ. 28ರಂದು ವಿಟ್ಲ ಬ್ಲಾಕ್ ಕಾಂಗ್ರೆಸ್ ಮತ್ತು ವಿವಿಧ ವಲಯ ಕಾಂಗ್ರೆಸ್  ವತಿಯಿಂದ ಕಾಂಗ್ರೆಸ್ ಜನ ಜಾಗೃತಿ ಸಭೆ

0
image_editor_output_image-202116913-1751034798547

ವಿಟ್ಲ: ವಿಟ್ಲ ಬ್ಲಾಕ್ ಕಾಂಗ್ರೆಸ್ ಮತ್ತು ಮಾಣಿಲ, ಪೆರುವಾಯಿ, ಕೇಪು.ಅಳಿಕೆ  ವಲಯ ಕಾಂಗ್ರೆಸ್ ನ ಆಶ್ರಯದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈಯವರ ನೇತೃತ್ವದಲ್ಲಿ ಬೃಹತ್ ಕಾಂಗ್ರೆಸ್ ಜನ ಜಾಗೃತಿ ಸಭೆಯು ಜೂ.28 ರಂದು ಈ ಕೆಳಗಿನಂತೆ ನಡೆಯಲಿದೆ.

1.ಬೆಳಿಗ್ಗೆ 10.00ಗಂಟೆಗೆ ಮಾಣಿಲ ವಲಯ ಕಾಂಗ್ರೆಸ್ ಆಶ್ರಯದಲ್ಲಿ ಮಾಣಿಲ ರಿಕ್ಷಾ ತಂಗುದಾಣ ಬಳಿ,
2.ಮಧ್ಯಾಹ್ನ 12.00 ಗಂಟೆಗೆ ಪೆರುವಾಯಿ ವಲಯ ಕಾಂಗ್ರೆಸ್ ಆಶ್ರಯದಲ್ಲಿ ಪೆರುವಾಯಿ ರಿಕ್ಷಾ ನಿಲ್ದಾಣ ಬಳಿ.
3.ಮಧ್ಯಾಹ್ನ 2.00 ಗಂಟೆಗೆ ಕೇಪು ವಲಯ ಕಾಂಗ್ರೆಸ್ ಆಶ್ರಯದಲ್ಲಿ ಅಡ್ಯನಡ್ಕ ಜಂಕ್ಷನ್ ಬಳಿ.
4 ಸಂಜೆ 4.00 ಗಂಟೆಗೆ  ಅಳಿಕೆ ವಲಯ ಕಾಂಗ್ರೆಸ್ ಆಶ್ರಯದಲ್ಲಿ ಶಾರದಾ ವಿಹಾರ ಜಂಕ್ಷನ್ನ ಬಳಿ.

ಈ ಸಭೆಯಲ್ಲಿ ಪುತ್ತೂರು ಶಾಸಕರಾದ  ಅಶೋಕ್ ಕುಮಾರ್ ರೈ ಸೇರಿದಂತೆ ಜಿಲ್ಲೆಯ ಹಲವು ಮಂದಿ ನಾಯಕರು ಭಾಗವಹಿಸಲಿದ್ದಾರೆ. ಇದಲ್ಲದೆ ಜಿಲ್ಲೆಯ ಪ್ರಮುಖ ವಾಗ್ಮಿಗಳು ಭಾಗವಹಿಸಿ ಸಾರ್ವಜನಿಕರಿಗೆ ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಬಿಜೆಪಿ ಹರಡುತ್ತಿರುವ ಸುಳ್ಳಿನ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದಾರೆ ಆದ್ದರಿಂದ ಮಾಣಿಲ,ಪೆರುವಾಯಿ,ಕೇಪು,ಅಳಿಕೆ ಗ್ರಾಮದ ಮತದಾರ ಬಂಧುಗಳು, ಕಾಂಗ್ರೆಸ್ ಕಾರ್ಯಕರ್ತರು,ಜನ ನಾಯಕರುಗಳು ಸೇರಿದಂತೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!