ವಿಟ್ಲ ಪ.ಪಂ ಚುನಾವಣೆ-ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ: ಬಡವರಿಗೆ ನಿವೇಶನ, ಏರಿಕೆಯಾದ ತೆರಿಗೆ ಮರುಪರಿಶೀಲನೆ, 400 ಕೆ.ವಿ ವಿರುದ್ಧ ಹೋರಾಟ ಮೊದಲಾದ ಭರವಸೆ
ವಿಟ್ಲ: ಡಿ.27ರಂದು ನಡೆಯಲಿರುವ ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಬಿಡುಗಡೆಗೊಂಡಿದೆ.
ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ನೂತನ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು. ಕೆಲವು ದಿನಗಳ ಹಿಂದೆ ಪ್ರಣಾಳಿಕೆ ಪತ್ರ ತಯಾರಿಸಲು ಸಾರ್ವಜನಿಕರಿಗೆ ಮನವಿ ಮಾಡಲಾಗಿತ್ತು. ಅದರಂತೆ ಅವರ ಸಲಹೆ ಮೇರೆಗೆ ಪ್ರಣಾಳಿಕೆ ತಯಾರಿಸಲಾಗಿದೆ ಎಂದು ಅವರು ತಿಳಿಸಿದರು.
ಪ್ರಣಾಳಿಕೆಯ ಅಂಶಗಳು:
1. ಬಂಟ್ವಾಳ ತಾಲೂಕಿನ ಬರಿಮಾರಿನಿಂದ ವಿಟ್ಲಕ್ಕೆ ಸಮರ್ಪಕ ಸಮಗ್ರ ಕುಡಿಯುವ ನೀರು ಸರಬರಾಜು
2. ವಿಟ್ಲ ಪಟ್ಟಣ ವ್ಯಾಪ್ತಿಯಲ್ಲಿ ADB ಸಹಯೋದೊಂದಿಗೆ KUDCEMP ಮೂಲಕ ಒಳಚರಂಡಿ ಯೋಜನೆ ಅನುಷ್ಟಾನ. ಪಟ್ಟಣ ಪಂಚಾಯತ್ ಸ್ವಾಧೀನದಲ್ಲಿರುವ ಭೂಮಿಯನ್ನು ವಸತಿ ರಹಿತರಿಗೆ ನಿವೇಶ ನೀಡುವುದು.
3. ವ್ಯವಸ್ಥಿತವಾಗಿ ಸಂತೆ ಮಾರುಕಟ್ಟೆ ಮತ್ತು ರೈತರಿಗೆ ಬಹುಪಯೋಗಿ ಕೃಷಿ ಮಾರುಕಟ್ಟೆ ನಿರ್ಮಾಣ
4. ಸುಧಾರಿತ ರೀತಿಯಲ್ಲಿ ವಾಹನ ಪಾರ್ಕಿಂಗ್ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ನಿತ್ಯ ಮಾರುಕಟ್ಟೆ ವ್ಯವಸ್ಥೆ
5. ವಿಟ್ಲಕ್ಕೆ ಪ್ರತ್ಯೇಕ ಪ್ರಾಧಿಕಾರ ವ್ಯವಸ್ಥೆಗೆ ಒತ್ತು ನೀಡುವುದು. ಮತ್ತು ವಿಟ್ಲ ಸಮುದಾಯ ಆಸ್ಪತ್ರೆಯನ್ನು ಮೂಲಭೂತ ಸೌಲಭ್ಯದೊಂದಿಗೆ ಮೇಲ್ದಾರ್ಜೆಗೆ ಏರಿಸುವುದು.
6. ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಸಮಸ್ಯೆ ನಿವಾರಿಸುವ ಬಗ್ಗೆ ಪ್ರಮಾಣಿಕ ವ್ಯವಸ್ಥೆ ಕಲ್ಪಿಸುವುದು.
7. ವಿಟ್ಲ ತಾಲೂಕು ರಚನೆಗೆ ಒತ್ತು ಹಾಗೂ 400 ಕೆ.ವಿ ವಿರುದ್ಧ ಹೋರಾಟ.
8. ಕೊರೊನಾ ವಿರುದ್ಧ ಹೋರಾಟ ಸಂದರ್ಭ ಏರಿಸಿದ ತೆರಿಗೆಗಳನ್ನು ಮರು ಪರಿಶೀಲನೆ.
9. ನಮ್ಮ ಯೋಜನೆ ಮತ್ತು ಯೋಚನೆ ಪ್ರಕಾರ ಹೊರ ವರ್ತುಲ ರಸ್ತೆ ಮತ್ತು ಪೇಟೆಯಲ್ಲಿ ಶಾಲಾ ಮಕ್ಕಳು, ಸಾರ್ವಜನಿಕರು ಸುಗಮವಾಗಿ ಚಲಿಸಲು ಮೇಲ್ಸೆತುವೆ ನಿರ್ಮಾಣ

ಈ ಸಂದರ್ಭ ಪುತ್ತೂರು ಮಾಜಿ ಶಾಸಕಿ ಶಕುಂತಾಳ ಶೆಟ್ಟಿ, ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್ ಮಹಮ್ಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವಿ ರಾಜಾರಾಮ್, ಮುರಳೀಧರ ರೈ ಮಠಂತಬೆಟ್ಟು, ಪ್ರವೀಣ್ ಚಂದ್ರ ಆಳ್ವ, ಚಂದ್ರಹಾಸ ಕರ್ಕೇರ, ಮೊದಲಾದವರು ಉಪಸ್ಥಿತರಿದ್ದರು.






