ಚಿಕ್ಕಬಳ್ಳಾಪುರ: ಕಿಡಿಗೇಡಿಗಳಿಂದ ಯೇಸು ಪ್ರತಿಮೆ ಧ್ವಂಸ: ದೂರು ದಾಖಲು
ಚಿಕ್ಕಬಳ್ಳಾಪುರ: ತಾಲೂಕಿನ ಸೂಸೆಪಾಳ್ಯ ಗ್ರಾಮದ ಬಳಿ ಕಿಡಿಗೇಡಿಗಳು ಯೇಸು ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ.
ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕ್ರೈಸ್ತ ಮುಖಂಡರು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ತಾಲೂಕಿನ ಸೂಸೆಪಾಳ್ಯ ಸಮೀಪ ರಂಗಧಾಮ ಕೆರೆ ಕಟ್ಟೆಯ ಬಳಿ ಯೇಸು ಮೂರ್ತಿ ನಿರ್ಮಿಸಲಾಗಿತ್ತು. ಇದೀಗ ದುಷ್ಕರ್ಮಿಗಳು ಮೂರ್ತಿಯನ್ನು ಒಡೆದು ವಿರೂಪಗೊಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಕ್ರೈಸ್ತ ಮುಖಂಡರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬಳಿಕ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಕಿಡಿಗೇಡಿಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಿ, ಅಥೋನಿ ಡ್ಯಾನಿಯಲ್ ಎಂಬುವವರು ದೂರು ನೀಡಿದ್ದಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ IPC section 427 ಅಡಿ ದೂರು ದಾಖಲಾಗಿದೆ.





