December 20, 2025

ಎಸ್.ವೈ.ಎಸ್. ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಡಾ. ಝೈನಿ ಕಾಮಿಲ್ ಆಯ್ಕೆ

0
IMG-20211222-WA0000.jpg

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘದ (ಎಸ್.ವೈ.ಎಸ್.) ರಾಜ್ಯ ಮಹಾಸಭೆ ಮತ್ತು ಪದಾಧಿಕಾರಿಗಳ ಪುನಾರಚನೆ ಸಮಾವೇಶವು ಚಿಕ್ಕಮಗಳೂರು ಜಿಲ್ಲೆಯ ಮಾಗಡಿ ಹ್ಯಾಂಡ್ ಪೋಸ್ಟ್, ಇಂಪಾಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದು ಮುಂದಿನ ಎರಡು ವರ್ಷಗಳ ಅವಧಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನೂತನ ಸಾಲಿನ ಅಧ್ಯಕ್ಷರಾಗಿ ಡಾ. ಎಮ್ಮೆಸ್ಸೆಂ ಅಬ್ದುಲ್‌ ರಶೀದ್ ಸಖಾಫಿ ಝೈನೀ ಕಾಮಿಲ್ ಸಖಾಫಿ ಕಕ್ಕಿಂಜೆ, ತಲಪಾಡಿ,  ಪ್ರಧಾನ ಕಾರ್ಯದರ್ಶಿಯಾಗಿ ಎಂ.ವೈ.ಅಬ್ದುಲ್‌ ಹಫೀಲ್ ಸ‌ಅದಿ ಕೊಳಕೇರಿ, ಕೊಡಗು,  ಕೋಶಾಧಿಕಾರಿಯಾಗಿ ಎಂ.ಅಬ್ದುಲ್‌ ಹಕೀಂ ಕೊಡ್ಲಿಪೇಟೆ, ಹಾಸನ, ಉಪಾಧ್ಯಕ್ಷರಾಗಿ ಸಯ್ಯಿದ್ ಜ‌ಅಫರ್ ಸಖಾಫ್ ತಂಙಳ್ ಕೋಟೇಶ್ವರ ಹಾಗೂ ಸಹಾಯಕ ಅಧ್ಯಕ್ಷರಾಗಿ ಹಾಜಿ ನವಾಝ್ ಅಹ್ಮದ್ ಬಳ್ಳಾರಿ ಇವರು ಸರ್ವಾನುಮತದಿಂದ ಆಯ್ಕೆಯಾದರು.

ಕಾರ್ಯದರ್ಶಿಗಳಾಗಿ ಜಿ.ಎಂ.ಮುಹಮ್ಮದ್ ಕಾಮಿಲ್ ಸಖಾಫಿ (ಸಂಘಟನೆ) ಟಿ.ಎಂ.ಮುಹ್ಯುದ್ದೀನ್ ಕಾಮಿಲ್ ಸಖಾಫಿ ತೋಕೆ (ಮೀಡಿಯಾ) ಕೆ.ಕೆ.ಮುಹ್ಯುದ್ದೀನ್ ಕಾಮಿಲ್ ಸಖಾಫಿ ಕೃಷ್ಣಾಪುರ (ದ‌ಅ್‌ವಾ) ಮುಹಮ್ಮದ್ ಬಶೀರ್ ಸ‌ಅದಿ ಪೀಣ್ಯ, ಬೆಂಗಳೂರು (ಇಸಾಬಾ) ಹಾಜಿ ಮುಹಮ್ಮದ್ ಹನೀಫ್ ಉಳ್ಳಾಲ (ಪಬ್ಲಿಕ್ ರಿಲೇಶನ್ಸ್) ಸಿ.ಎಂ.ಹಂಝ ನೆಲ್ಲಿಹುದಿಕೇರಿ, ಕೊಡಗು (ಸೋಷಿಯಲ್) ಅಬ್ದುಲ್‌ ಹಮೀದ್ ಬಜಪೆ (ನಾರ್ತ್ ಝೋನ್)ಇವರನ್ನು ಆರಿಸಲಾಯಿತು.

ಕಾರ್ಯಕಾರಿಣಿ ಸಮಿತಿಯ ಸದಸ್ಯರಾಗಿ ಉಸ್ಮಾನ್ ಸ‌ಅದಿ ಪಟ್ಟೋರಿ, ಸಯ್ಯಿದ್ ಇಸ್ಮಾಯಿಲ್ ತಂಙಳ್ ಮದನಿ ಉಜಿರೆ, ಎಪಿಎಸ್ ಹುಸೈನುಲ್ ಅಹ್ದಲ್ ತಂಙಳ್ ಉಪ್ಪಳ್ಳಿ, ಸಯ್ಯಿದ್ ಶಾಫಿ ‌ನ‌ಈಮಿ ಜಮಲುಲ್ಲೈಲಿ ತಂಙಳ್ ಮಾರನಹಳ್ಳಿ, ಅಶ್ರಫ್ ಸ‌ಅದಿ ಮಲ್ಲೂರು, ಅಬೂಬಕರ್ ಸ‌ಅದಿ ಮಜೂರು, ಮುಹಮ್ಮದ್ ಅಲಿ ಸಖಾಫಿ ಅಶ್‌ಅರಿಯ, ಎನ್.ಎ.ಅಬ್ದುಲ್‌ ರಹ್ಮಾನ್ ಮದನಿ ಜೆಪ್ಪು, ಅಬ್ದುಲ್‌ ಹಮೀದ್ ಸಖಾಫಿ ಕೊಡಂಗಾಯಿ, ಕೆ.ಎಂ.ಅಬೂಬಕರ್ ಸಿದ್ದೀಖ್ ಮೋಂಟುಗೋಳಿ, ಇಬ್ರಾಹಿಂ ಖಲೀಲ್ ಬೋಳಂತೂರು, ವಿ.ಪಿ.ಮೊಯ್ದೀನ್ ಪೊನ್ನತ್‌ಮೊಟ್ಟೆ ಕೊಡಗು, ಮನ್ಸೂರ್ ಅಲಿ ಕೋಟಗದ್ದೆ ತೀರ್ಥಹಳ್ಳಿ, ಇಕ್ಬಾಲ್ ಬಪ್ಪಳಿಗೆ ಪುತ್ತೂರು, ಶಾಹುಲ್ ಹಮೀದ್ ಮುಸ್ಲಿಯಾರ್ ನಗರ ಶಿವಮೊಗ್ಗ, ಬಾವಾ ಫಖ್ರುದ್ದೀನ್ ಕೃಷ್ಣಾಪುರ, ಎ.ಕೆ.ಹಸೈನಾರ್ ಸಕಲೇಶಪುರ, ಅಬ್ದುಲ್‌ ರಹ್ಮಾನ್ ರಝ್ವಿ ಉಡುಪಿ, ಅಬ್ದುಲ್‌ ಅಝೀಝ್ ಮಿಸ್‌ಬಾಹಿ ಮೈಸೂರು, ಕೆ.ಎಂ.ಶರೀಫ್ ಭಟ್ಕಳ, ಎನ್.ಎ.ಸುಲೈಮಾನ್ ಶೆಟ್ಟಿಕೊಪ್ಪ, ಎಂ.ಬಿ.ಎಂ.ಸಾದಿಖ್ ಮಾಸ್ಟರ್ ಮಲೆಬೆಟ್ಟು, ಖಾಸಿಂ ಪದ್ಮುಂಜ, ಎಂ.ಎಚ್ ಅಬ್ದುಲ್‌ ಖಾದರ್ ಉಪ್ಪಿನಂಗಡಿ, ಅಡ್ವಕೇಟ್ ಹಂಝತ್ ಉಡುಪಿ, ಅಬ್ದುಲ್‌ ಹಮೀದ್ ಬೀಜಕೊಚ್ಚಿ ಸುಳ್ಯ ಅವರನ್ನು ಆರಿಸಲಾಯಿತು.

ನಿಕಟಪೂರ್ವ ರಾಜ್ಯಾಧ್ಯಕ್ಷ ಮೌಲಾನಾ ಪಿ.ಎಂ.ಉಸ್ಮಾನ್ ಸ‌ಅದಿ ಪಟ್ಟೋರಿ ಅವರ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಿತು.ಪುನಾರಚನೆ ಪ್ರಕ್ರಿಯೆಗೆ ರಾಜ್ಯ ಸುನ್ನೀ ಕೋ ಆರ್ಡಿನೇಷನ್ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ಪಿ.ಹಂಝ ಸಖಾಫಿ ಬಂಟ್ವಾಳ ನೇತೃತ್ವ ನೀಡಿದರು.

Leave a Reply

Your email address will not be published. Required fields are marked *

You may have missed

error: Content is protected !!