ಉಪ್ಪಿನಂಗಡಿ: ಅವಿವಾಹಿತ ಯುವಕ ಹೃದಯಾಘಾತದಿಂದ ನಿಧನ
ಉಪ್ಪಿನಂಗಡಿ: ಅವಿವಾಹಿತ ಯುವಕನಿಗೆ ತನ್ನ ಮನೆಯಲ್ಲಿ ದಿಡೀರನೆ ಉಂಟಾದ ಹೃದಯಾಘಾತದಿಂದ ಮೃತಪಟ್ಟ ಘಟನೆ ಉಪ್ಪಿನಂಗಡಿ ಜಾರಿಗೆ ಬೈಲ್ ನಲ್ಲಿ ನಡೆದಿದೆ. ಮೃತಪಟ್ಟ ಯುವಕ ಶಾಕಿರ್(24) ಎಂದು ತಿಳಿದು ಬಂದಿದೆ.
ಇವರು ಎಂದಿನಂತೆ ಬೆಳಿಗ್ಗೆ ನಮಾಝ್ ಮಾಡಲು ಜಾರಿಗೆ ಬೈಲ್ ಮಸೀದಿಗೆ ತೆರಳಿದ್ದರು. ಮಸೀದಿಯಿಂದ ಬಂದ ಯುವಕ ತಾಯಿ ಬಳಿ ಸ್ವಲ್ಪ ಎದೆನೋವು ಇದೆ ಎಂದು ಹೇಳಿಕೊಂಡಿದ್ದರು. ಆದರೆ ವಿದಿಯಾಟ ಬೇರೆಯೇ ಆಗಿದ್ದು ತಾಯಿಯಲ್ಲಿ ನೋವಿನ ಬಗ್ಗೆ ತಿಳಿಸಿ ಒಂದಷ್ಟು ನಿಮಿಷಗಳ ಬಳಿಕ ದಿಡೀರ್ ಆಗಿ ಹೃದಯಾಘಾತ ಸಂಭವಿಸಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.





