ಬಂಟ್ವಾಳ: ಭಾರೀ ಮಳೆಗೆ ಮನೆಯೊಳಗೆ ನುಗ್ಗಿದ ನೀರು
ಬಂಟ್ವಾಳ: ಸೂರಿಕುಮೇರು ಸಮೀಪದ ದಾಸಕೋಡಿ ಎಂಬಲ್ಲಿ ವಾಸ್ತವ್ಯ ಇಲ್ಲದ ಮನೆಯೊಳಗೆ ನೀರು ನುಗ್ಗಿದೆ. ಮನೆಯ ಸುತ್ತಲೂ ನೀರು ಅವರಿಸಿ ಮುಕ್ಕಾಲು ಮನೆ ಮುಳುಗಿದ ಸ್ಥಿತಿಯಲ್ಲಿದೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವಾಂತರದಿಂದ ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದೆ ಮನೆ ಜಲಾವೃತಗೊಂಡಿದೆ.
ಅದೃಷ್ಟವಶಾತ್ ಮನೆಯಲ್ಲಿ ಕೆಲ ವರ್ಷಗಳಿಂದ ವಾಸ್ತವ್ಯ ಇಲ್ಲದ ಕಾರಣ ಯಾವುದೇ ಅಪಾಯವಿಲ್ಲ. ಇದರ ಜೊತೆ ಸಮೀಪದ ಕೃಷಿ ತೋಟಕ್ಕೂ ನೀರು ನುಗ್ಗಿದೆ.
ನೀರು ಸರಿಯಾಗಿ ಹರಿದು ಹೋಗುವ ವ್ಯವಸ್ಥೆ ಇಲ್ಲದ ಕಾರಣದಿಂದ ಸಮೀಪದ ಮನೆಗೂ ನೀರು ನುಗ್ಗುವ ಅಪಾಯವಿದ್ದು, ಸ್ಥಳೀಯ ಆಡಳಿತ ಎಚ್ಚರಿಕೆ ವಹಿಸಬೇಕಾಗಿದೆ.




