ಉಳ್ಳಾಲ: ಆಟೋ ರಿಕ್ಷಾದ ಮೇಲೆ ದಾಳಿ ನಡೆಸಿ, ವ್ಯಕ್ತಿಯ ಕೊಲೆ ಯತ್ನ: ಆರೋಪಿಯ ಬಂಧನ
ಉಳ್ಳಾಲ: ಕಳವುಗೈದ ರಿಕ್ಷಾ ಬ್ಯಾಟರಿಗಳನ್ನು ವಾಪಸ್ ತಂದು ಇಡುವಂತೆ ಹೇಳಿದ್ದಕ್ಕೆ ಆಕ್ರೋಶಗೊಂಡ ರೌಡಿಶೀಟರ್ ಓರ್ವ ರಿಕ್ಷಾ ಗಾಜು ಒಡೆದು ಯುವಕನೋರ್ವನ ಮೇಲೆ ಕತ್ತಿ ಬೀಸಿ ಕೊಲೆಗೆ ಯತ್ನಿಸಿ, ಮನೆ ಮಹಿಳೆಯರಿಗೆ ಅವಾಚ್ಯವಾಗಿ ನಿಂದಿಸಿ ಕೊಲೆಬೆದರಿಕೆ ಹಾಕಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಹೈದರ್ ಆಲಿ ರಸ್ತೆಯ ಮುಕ್ಕಚ್ಚೇರಿ ಎಂಎಫ್‌ಸಿ ಕ್ಲಬ್ ಹತ್ತಿರ ನಡೆದಿದೆ.
ಘಟನೆ ಸಂಬಂಧ ಕಾರ್ಯಪ್ರವೃತ್ತರಾದ ಉಳ್ಳಾಲ ಪೊಲೀಸರು ಆರೋಪಿ ರೌಡಿಶೀಟರ್ ಅರ್ಫಾನ್‌ನನ್ನು ಬಂಧಿಸಿದ್ದಾರೆ.
ಅಬ್ದುಲ್ಲಾ ಹಮೀದ್ ಎಂಬವರ ಮನೆಯಲ್ಲಿ ಈ ಕೃತ್ಯ ನಡೆದಿದೆ. ಹಮೀದ್ ಅವರ ರಿಕ್ಷಾದ ಗಾಜನ್ನು ಒಡೆದ ಆರೋಪಿ ಬಳಿಕ ಅಳಿಯ ಮೊಹಮ್ಮದ್ ಇರ್ಷಾದ್ ಅವರ ರಿಕ್ಷಾದ ಗಾಜನ್ನು ಒಡೆಯಲು ಮುಂದಾಗಿದ್ದಾನೆ.
ಅಲ್ಲದೆ ಹಮೀದ್ ಅವರ ಪುತ್ರ ಆದಿಲ್ ಅಹಮ್ಮದ್ ಎಂಬವರ ಮೇಲೆ ಕತ್ತಿಯಿಂದ ದಾಳಿ ನಡೆಸಿ ಕೊ*ಲೆಗೆ ಯತ್ನಿಸಿದ್ದನು. ಈ ಕುರಿತು ಕಾರ್ಯಪ್ರವೃತ್ತರಾದ ಉಳ್ಳಾಲ ಠಾಣಾಧಿಕಾರಿ ವಿರೂಪಾಕ್ಷ ಸ್ವಾಮಿ ನೇತೃತ್ವದ ಪೊಲೀಸರ ತಂಡ ಇಬ್ಬರನ್ನು ಬಂಧಿಸಿದ್ದಾರೆ.




