December 15, 2025

ವಿಟ್ಲ ಜೇಸಿ ಶಾಲೆ: ವಿದ್ಯಾರ್ಥಿ ಚುನಾವಣೆ: ಶಾಲಾ ನಾಯಕನಾಗಿ ಮೋನಿಶ್, ಉಪನಾಯಕನಾಗಿ ಚೈತನ್ಯಕೃಷ್ಣ ಬಿ ಆಯ್ಕೆ

0
image_editor_output_image2143180638-1749832373772

ವಿಟ್ಲ ಬಸವನಗುಡಿ ಬಳಿಯ ವಿಠಲ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2025- 26 ನೇ ಶೈಕ್ಷಣಿಕ ವರ್ಷದ ಶಾಲಾ ವಿದ್ಯಾರ್ಥಿ ಚುನಾವಣೆ ನಡೆಯಿತು.

ಚುನಾವಣೆಯಲ್ಲಿ ಹತ್ತನೇ ತರಗತಿಯ ಮೋನಿಶ್ ಎಲ್  ನಾಯಕನಾಗಿ, ಹಾಗೂ 7ನೇ ತರಗತಿಯ ಚೈತನ್ಯಕೃಷ್ಣ ಬಿ. ಉಪನಾಯಕನಾಗಿ ಆಯ್ಕೆಯಾದರು. 5ನೇ ತರಗತಿಯಿಂದ 10ನೇ ತರಗತಿಯ ವರೆಗಿನ ಸುಮಾರು 600 ವಿದ್ಯಾರ್ಥಿಗಳು ಚುನಾವಣೆಯಲ್ಲಿ 3 ಮತಗಟ್ಟೆಗಳಲ್ಲಿ ಮತ ಚಲಾಯಿಸಿದ್ದರು. ನಾಯಕ ಮತ್ತು ಉಪನಾಯಕ ಸ್ಥಾನಕ್ಕೆ ಒಟ್ಟಾಗಿ 11 ವಿದ್ಯಾರ್ಥಿಗಳು ಚುನಾವಣಾ ಕಣದಲ್ಲಿದ್ದು ಮತ ಯಾಚಿಸಿದ್ದರು. ಸಹ ಶಿಕ್ಷಕಿ ಹರ್ಷಿತ ಲಿತಿನ್ ಚುನಾವಣಾ ಮಾಹಿತಿ ನೀಡಿದರು.

ಪ್ರಾಂಶುಪಾಲ ಜಯರಾಮ ರೈ ಚುನಾವಣಾ ಮಹತ್ವ ತಿಳಿಸಿದರು. ಪ್ರಾಂಶುಪಾಲೆ ಜ್ಯೋತಿ ಶೆಣೈ,ದೈಹಿಕ ಶಿಕ್ಷಕ ಭಾನುಪ್ರಕಾಶ್ ಹಾಗೂ ಶಿಕ್ಷಕರು ಶಾಲಾ ಚುನಾವಣಾ ನೀತಿಯಂತೆ ವಿವಿಧ ಅಧಿಕಾರಿಗಳಾಗಿ ಸಹಕರಿಸಿದರು. ಮತಯಾಚನೆಯ ಕಾರ್ಯಕ್ರಮದಲ್ಲಿ ಶ್ರೀಮತಿ ರಶ್ಮಿ ಶ್ರೀಪತಿಯವರು ನಿರೂಪಿಸಿ, ವಂದಿಸಿದರು.

Leave a Reply

Your email address will not be published. Required fields are marked *

error: Content is protected !!