February 3, 2026

ಕೊಳತ್ತಮಜಲು: ಹತ್ಯೆಯಾದ ಅಬ್ದುಲ್ ರಹ್ಮಾನ್ ಮನೆಗೆ ಸ್ಪೀಕರ್ ಯು.ಟಿ ಖಾದರ್ ಭೇಟಿ

0
image_editor_output_image-1131042761-1749637344419

ಬಂಟ್ವಾಳ: ಇತ್ತೀಚೆಗೆ ಹತ್ಯೆಗೀಡಾದ ಕೊಳತ್ತಮಜಲು ಅಬ್ದುಲ್ ರಹೀಂ ಮನೆಗೆ ಸ್ಪೀಕರ್ ಯು.ಟಿ ಖಾದರ್ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಅಬ್ದುಲ್ ರಹೀಮ್ ಅವರ ತಂದೆ ಹಾಗೂ ಕುಟುಂಬಸ್ಥರ ಜೊತೆ ಯಟಿ ಖಾದರ್ ಮಾತನಾಡಿದರು. ರಹೀಂ ಸಹೋದರ ಮಾತನಾಡಿ, ನನ್ನ ತಮ್ಮ ಅಮಾಯಕ, ನಾವು ಊರಿನಲ್ಲಿ ಹಿಂದೂ ಮುಸ್ಲಿಮ್ ಅಣ್ಣ ತಮ್ಮ ರೀತಿಯಲ್ಲಿ ಇದ್ದೇವೆ. ನನ್ನ ತಮ್ಮನನ್ನು ವಿನಾ ಕಾರಣ ಹತ್ಯೆ ಮಾಡಿದ್ದಾರೆ, ನಮಗೆ ನ್ಯಾಯ ಸಿಗಬೇಕು, ಎಸ್‌ಐಟಿ ಮೂಲಕ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಈ ಪ್ರಕರಣದಲ್ಲಿ 7, 8 ಮಂದಿಯನ್ನು ಮಾತ್ರ ಬಂಧಿಸಲಾಗಿದೆ. ಹಲವರು ಈ ಪ್ರಕರಣದಲ್ಲಿ ಇದ್ದಾರೆ. ಕೊಲೆಗೆ ಯಾರು ಪ್ರೇರೇಪಿಸಿದರು ಅವರನ್ನೂ ಬಂಧಿಸಬೇಕು ಎಂದು ಮನವಿ ಮಾಡಿದರು. ರಹೀಂ ಕುಟುಂಬಕ್ಕೆ ಎಲ್ಲಾ ರೀತಿಯ ಸಹಾಯ ಸಹಕಾರ ನೀಡುವ ಬಗ್ಗೆ ಯ.ಟಿ ಖಾದರ್ ಭರವಸೆಯನ್ನು ನೀಡಿದರು.

Leave a Reply

Your email address will not be published. Required fields are marked *

You may have missed

error: Content is protected !!