March 22, 2026

ಬಂಟ್ವಾಳ: ಗಂಡನ ಜೊತೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ವ್ಯಕ್ತಿಯಿಂದ ಅಸಭ್ಯ ವರ್ತನೆ: ಆರೋಪಿಯ ಬಂಧನ

0
1682536804_index-scaled.jpeg

ಬಂಟ್ವಾಳ: ಗಂಡನ‌ ಜೊತೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಸಂತ್ರಸ್ತ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ ದೈಹಿಕ ಕಿರುಕುಳ ನೀಡಿದ ಘಟನೆ ನಡೆದಿದ್ದು, ಈ ಕುರಿತು ‌ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೋಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಅಬುಬಕ್ಕರ್ ಎಂಬಾತ ಆರೋಪಿಯಾಗಿದ್ದಾನೆ

ಸಂತ್ರಸ್ತ ಮಹಿಳೆ ತನ್ನ ಗಂಡನ ಎಂಬವರ ಜೊತೆ ಉಜಿರೆಯಿಂದ ಮಂಗಳೂರು ಪ್ರಯಾಣಿಸುತ್ತಿದ್ದ ವೇಳೆ ಬಂಟ್ವಾಳ ಬಿ.ಕಸ್ಬಾ ಗ್ರಾಮದ ತುಂಬೆ ಜಂಕ್ಷನ್ ಎಂಬಲ್ಲಿ ಬಸ್ಸಿನಲ್ಲಿ ನಿಂತುಕೊಂಡಿದ್ದ ಆರೋಪಿ ಅಬುಬಕ್ಕರ್ ದೈಹಿಕ ಕಿರುಕುಳ ನೀಡಿದ್ದಾನೆ ಎಂದು ಬಂಟ್ವಾಳ ‌ನಗರ ಪೋಲೀಸ್ ಠಾಣೆಗೆ ದೂರು‌ನೀಡಿದ್ದಾರೆ.

ದೂರಿನ ಕುರಿತು ಪರಿಶೀಲಿಸಿ ಬಂಟ್ವಾಳ ನಗರ ಪೋಲೀಸರು ‌ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!