ಗೂಗಲ್ ಮ್ಯಾಪ್ ನಂಬಿ ಹೊರಟ ಕಾರು ಪ್ಲೈಓವರ್ ನಲ್ಲಿ ಅಪಘಾತ: ಘಟನೆ ವೀಡಿಯೋ ವೈರಲ್
ಉತ್ತರಪ್ರದೇಶ: ಗೂಗಲ್ ಮ್ಯಾಪ್ ನಂಬಿ ಹೊರಟ ಕಾರೊಂದು ನಿರ್ಮಾಣ ಹಂತದ ಫ್ಲೈ ಓವರ್ ನಲ್ಲಿ ತಲೆ ಕೆಳಗಾಗಿ ಸಿಲುಕಿಕೊಂಡಿರುವ ಘಟನೆ ಉತ್ತರ ಪ್ರದೇಶದ ಮಹಾರಾಜಗಂಜ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 24 ರಲ್ಲಿ ಭಾನುವಾರ ಸಂಭವಿಸಿದೆ.
ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಏನಿದು ಘಟನೆ:
ಕಳೆದ ಭಾನುವಾರ (ಜೂನ್.8) ರಂದು ನೇಪಾಳದ ಕುಟುಂಬವೊಂದು ಕಾರ್ಯಕ್ರಮ ನಿಮಿತ್ತ ಗೋರಖ್‌ಪುರಕ್ಕೆ ಕಾರಿನಲ್ಲಿ ಹೊರಟಿತ್ತು ಆದರೆ ಕಾರು ಚಾಲಕನಿಗೆ ಮಾರ್ಗ ಸರಿಯಾಗಿ ಗೊತ್ತಿರದ ಕಾರಣ ಗೂಗಲ್ ಮ್ಯಾಪ್ ನಂಬಿಕೊಂಡು ಪ್ರಯಾಣ ಬೆಳೆಸಿದ್ದಾನೆ ಅದರಂತೆ ಮಧ್ಯರಾತ್ರಿ ಸುಮಾರು ಒಂದು ಗಂಟೆಯ ಹೊತ್ತಿಗೆ ಕಾರು ಉತ್ತರ ಪ್ರದೇಶದ ಮಹಾರಾಜಗಂಜ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 24 ಸಂಚರಿಸುವ ವೇಳೆ ನಿರ್ಮಾಣ ಹಂತದ ಫ್ಲೈ ಓವರ್ ಮಾರ್ಗವನ್ನು ಗೂಗಲ್ ಮ್ಯಾಪ್ ತೋರಿಸಿದೆ ಆದರೆ ಚಾಲಕನಿಗೆ ಇದರ ಅರಿವಿಲ್ಲದೆ ನಿರ್ಮಾಣ ಹಂತದ ಫ್ಲೈ ಓವರ್ ಮೇಲೆ ಕಾರು ಚಲಾಯಿಸಿಕೊಂಡು ಹೋಗಿದ್ದಾನೆ ಆದರೆ ಫ್ಲೈ ಓವರ್ ಮಧ್ಯದಲ್ಲಿ ಕಾಮಗಾರಿ ನಡೆಯುತ್ತಿದ್ದುದರಿಂದ ಮುಂದಕ್ಕೆ ಮಾರ್ಗ ಇರಲಿಲ್ಲ ಇದನ್ನು ಗಮನಿಸಿದ ಕಾರು ಚಾಲಕ ಒಮ್ಮೆಲೇ ಬ್ರೇಕ್ ಹಾಕಿದ್ದಾನೆ ಆದರೆ ಕಾರು ನಿಲ್ಲುವಷ್ಟರಲ್ಲಿ ಫ್ಲೈ ಓವರ್ ನ ಅಂಚಿಂದ ಕೆಳ ಮುಖವಾಗಿ ಬಿದ್ದು ಸಿಲುಕಿಕೊಂಡಿದೆ.
ಸರಿಯಾದ ಸೂಚನಾ ಫಲಕವಿಲ್ಲದೆ ಗೊಂದಲ:
ಕಾಮಗಾರಿ ನಡೆಯುತ್ತಿದ್ದ ಕಾರಣ ಅಧಿಕಾರಿಗಳೂ ರಸ್ತೆಗೆ ಯಾವುದೇ ಫಲಕಗಳನ್ನು ಹಾಕದೆ ವಾಹನ ಸವಾರರಿಗೆ ಗೊಂದಲ ಸೃಸ್ಟಿಸಿದ್ದು ಹೊಸದಾಗಿ ಈ ಮಾರ್ಗದಲ್ಲಿ ಬರುವವರು ಸರಿಯಾದ ಫಲಕವಿಲ್ಲದೆ ಫ್ಲೈ ಓವರ್ ಮಾರ್ಗದಲ್ಲೇ ಸಂಚರಿಸಿ ಬಳಿಕ ವಾಪಾಸ್ ಬರುತ್ತಾರೆ ಎಂದು ಅಲ್ಲಿನ ಸ್ಥಳೀಯರು ಹೇಳಿದ್ದಾರೆ.
ತಪ್ಪಿದ ಅನಾಹುತ:
ಫ್ಲೈ ಓವರ್ ಮೇಲೆ ಕಾರು ಸಿಲುಕಿಕೊಂಡಿದ್ದು ಕಾರಿನಲ್ಲಿದ್ದ ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಅದೃಷ್ಟವಶಾತ್ ಪಾರಾಗಿದ್ದಾರೆ, ಅಲ್ಲದೆ ಗೂಗಲ್ ಮ್ಯಾಪ್ ಕೂಡ ರಸ್ತೆ ರಿಪೇರಿಯಾಗುತ್ತಿರುವ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ, ಫ್ಲೈ ಓವರ್ ಮಾರ್ಗವನ್ನೇ ತೋರಿಸಿದ್ದರಿಂದ ನಾವು ಅದೇ ಮಾರ್ಗದಲ್ಲಿ ಸಂಚರಿಸಿದೆವು ಎಂದು ಕಾರು ಚಾಲಕ ಹೇಳಿದ್ದಾರೆ
ರಾತ್ರಿ ದೊಡ್ಡ ಸದ್ದು ಕೇಳಿ ಬಂದೆವು:
ಇನ್ನು ಇಲ್ಲಿನ ಸ್ಥಳೀಯರು ಹೇಳುವ ಪ್ರಕಾರ ರಾತ್ರಿ ಹೊತ್ತು ದೊಡ್ಡ ಸದ್ದು ಕೇಳಿ ಎಚ್ಚರವಾಯಿತು ಬಳಿಕ ಮನೆಯ ಇತರ ಮಂದಿಯನ್ನು ಎಬ್ಬಿಸಿ ಬಂದು ನೋಡಿದಾಗ ಕಾರೊಂದು ಫ್ಲೈ ಓವರ್ ಅಂಚಿನಲ್ಲಿ ಬಿದ್ದಿರುವುದು ಕಂಡುಬಂತು ಅಲ್ಲದೆ ಕಾರಿನಲ್ಲಿದ್ದವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ, ಇಲ್ಲಿ ಹೆಚ್ಚಿನ ವಾಹನ ಸವಾರರು ಸರಿಯಾದ ಸೂಚನಾ ಫಲಕವಿಲ್ಲದೆ ದಾರಿ ತಪ್ಪಿ ಫ್ಲೈ ಓವರ್ ಮೇಲೆ ಬಂದು ಅಪಾಯಕ್ಕೆ ಸಿಲುಕುತ್ತಿದ್ದಾರೆ, ಫ್ಲೈ ಓವರ್ ನಿರ್ಮಾಣ ಸಂಸ್ಥೆಯ ಅವ್ಯವಸ್ಥೆಯಿಂದ ಈ ದುರಂತಗಳು ನಡೆಯುತ್ತಿವೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.




