December 15, 2025

ಪುತ್ತೂರು ತಾಲೂಕಿನಲ್ಲಿ ಭಾರೀ ಮಳೆಗೆ  ಹಲವು ಮನೆಗಳ ಮೇಲೆ ಗುಡ್ಡ ಕುಸಿತ – ಜನರ ಸ್ಥಳಾಂತರ:  ಧರೆ ಕುಸಿದು ಶಾಸಕ ಅಶೋಕ್ ರೈ ಮನೆಯ ದನ ಮೃತ್ಯು

0
image_editor_output_image-1557835935-1748671349770

ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ ಗ್ರಾಮದಲ್ಲಿ ಹಲವು ಕಡೆ ಭೀಕರ ಭೂಕುಸಿತವಾಗಿದೆ. ರಣಭೀಕರ ಮಳೆಯಿಂದಾಗಿ ಪುತ್ತೂರು ಶಾಸಕ ಅಶೋಕ್ ರೈಯವರ ಕೋಡಿಂಬಾಡಿ ರೈ ಎಸ್ಟೇಟ್ ನಲ್ಲಿ ಗುಡ್ಡ ಕುಸಿದು ಹಟ್ಟಿಯಲ್ಲಿದ್ದ ಒಂದು ದನ ಮೃತಪಟ್ಟಿದೆ.

ಬೆಳ್ಳಿಪ್ಪಾಡಿ-ಕಠಾರ-ಕೋಟೆಲು ಭಾಗಕ್ಕೆ ಸಂಪರ್ಕಿಸುವ ಸಕಲೇಶ್ವರ ದೇವಸ್ಥಾನದ ಬಳಿಯ ಗುತ್ತಿನಮನೆ ಎಂಬಲ್ಲಿ ರಸ್ತೆಗೆ ಧರೆ ಕುಸಿದುಬಿದ್ದು ಸಂಪರ್ಕ ಕಡಿತವಾಗಿದೆ. ಮೇಲ್ಭಾಗದಲ್ಲಿ ಎರಡು ಮನೆಗಳು ತೀರ ಅಪಾಯಕಾರಿ ಸ್ಥಿತಿಯಲ್ಲಿವೆ.

ಕಳೆದ ವರ್ಷ ಮಳೆಗಾಲದಲ್ಲೂ ಬೆಳ್ಳಿಪ್ಪಾಡಿಯಲ್ಲಿ ಭಾರಿ ದುರಂತ ಸಂಭವಿಸಿತ್ತು.

Leave a Reply

Your email address will not be published. Required fields are marked *

You may have missed

error: Content is protected !!