ನಾರ್ಶ ಮಸೀದಿ ನೂತನ ಆಡಳಿತ ಸಮಿತಿ ಅಸ್ತಿತ್ವಕ್ಕೆ: ನೂತನ ಅಧ್ಯಕ್ಷರಾಗಿ ಹಮೀದ್ ನಾರ್ಶ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ನಾರ್ಶ,
ವಿಟ್ಲ: ನಾರ್ಶ ರಹ್ಮಾನಿಯ ಜುಮಾ ಮಸೀದಿ ಹಯಾತುಲ್ ಇಸ್ಲಾಂ ಮದರಸ ಕಮೀಟಿ ಇದರ 2025-2028 ನೇ ಸಾಲಿನ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಸಂಘಟಕ ಹಮೀದ್ ನಾರ್ಶ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ನಾರ್ಶ ರವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಜಮಾತಿನ ಸುದೀರ್ಘ ಅವಧಿಯ ಖತೀಬರಾದ ಸುಲೈಮಾನ್ ಮುಸ್ಲಿಯಾರ್ ನಾರ್ಶ ರವರ ಗೌರವ ಅಧ್ಯಕ್ಷತೆಯಲ್ಲಿ, ಅಧ್ಯಕ್ಷರಾದ ಹಾಜಿ ಸುಲೈಮಾನ್ ನಾರ್ಶ ರವರ ಅಧ್ಯಕ್ಷತೆಯಲ್ಲಿ ದ.ಕ ಜಿಲ್ಲಾ ವಕ್ಪ್ ಆಡಳಿತ ಅಧಿಕಾರಿ ಅಬೂಬಕ್ಕರ್ ರವರ ಉಪಸ್ಥಿತಿಯಲ್ಲಿ ದಿನಾಂಕ:23/05/2025ರ ಶುಕ್ರವಾರ ಹಯಾತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ನಡೆದ ಜಮಾತ್ ಸರ್ವ ಸದಸ್ಯರ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.
ಉಪಾಧ್ಯಕ್ಷರಾಗಿ ಇಬ್ರಾಹಿಂ ಮುಸ್ಲಿಯಾರ್ ನಾರ್ಶ, ಕೋಶಾಧಿಕಾರಿಯಾಗಿ ಅಬೂಬಕ್ಕರ್ ಮುಸ್ಲಿಯಾರ್ ಮಿತ್ತಬೈಲ್, ಜೊತೆ ಕಾರ್ಯದರ್ಶಿಯಾಗಿ ಶರೀಫ್ ನಾರ್ಶ ಸದಸ್ಯರಾಗಿ ಹಮೀದ್ ಮದನಿ ನಾರ್ಶ, ಅದ್ರಾಮ ನಾರ್ಶ, ಇಬ್ರಾಹಿಂ ಹೊಸಮನೆ, ಇಸ್ಮಾಯಿಲ್ ನಾರ್ಶ ಅಕ್ಕರೆ, ಇಬ್ರಾಹಿಂ ನಾರ್ಶ ಅಕ್ಕರೆ, ಇಬ್ರಾಹಿಂ ಬೋಳಂತೂರು ರವರನ್ನು ಒಳಗೊಂಡ 11 ಜನರ ಆಡಳಿತ ಸಮೀತಿ ಅಸ್ಥಿತ್ವಕ್ಕೆ ತರಲಾಯಿತು..




