ಬಂಟ್ವಾಳ: ಅಬ್ದುಲ್ ರಹ್ಮಾನ್ ಹತ್ಯೆ ಪ್ರಕರಣ: ಮತ್ತಿಬ್ಬರು ಆರೋಪಿಗಳ ಬಂಧನ: ಬಂಧಿತರ ಸಂಖ್ಯೆ 5ಕ್ಕೆ ಏರಿಕೆ
ಮಂಗಳೂರು: 2 ದಿನಗಳ ಹಿಂದೆ ಬಂಟ್ವಾಳದಲ್ಲಿ ನಡೆದ ಟೆಂಪೋ ಚಾಲಕ ಅಬ್ದುಲ್ ರಹೀಂ ಅವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಟ್ವಾಳ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಮತ್ತಿಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಧಾನ ಆರೋಪಿ ಸುಮಿತ್ ಮತ್ತು ರವಿರಾಜ್ ಬಂಧಿತರು. ಇವರ ಬಂಧನದೊಂದಿಗೆ ಪ್ರಕರಣದಲ್ಲಿ ಈವರೆಗೆ ಬಂಧಿತರಾದ ಆರೋಪಿಗಳ ಒಟ್ಟು ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
ಈ ಮೊದಲು ಪ್ರಕರಣದ ಮೂವರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಬಂಟ್ವಾಳ ಮೂಲದ ದೀಪಕ್ (21), ಪೃಥ್ವಿರಾಜ್ (21), ಮತ್ತು ಚಿಂತನ್ (19) ಎಂಬುವವರೇ ಈ ಹಿಂದೆ ಬಂಧಿತರಾಗಿದ್ದ ಆರೋಪಿಗಳು.
ಮೇ 27ರಂದು ಮಧ್ಯಾಹ್ನ ಹತ್ಯೆ ನಡೆದಿತ್ತು. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ (ಅ ಕ್ರ 54/2025, ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 191[1], 191[2], 191[3], 118[1], 118[2], 109, 103 ಮತ್ತು 190 ರ ಅಡಿಯಲ್ಲಿ) ದಾಖಲಾಗಿತ್ತು.




