March 22, 2026

ಪಿರಿಯಾಪಟ್ಟಣ: ನಿಂತಿದ್ದ ಶಾಲಾ ಬಸ್ಸಿಗೆ ಹೊತ್ತಿಕೊಂಡ ಬೆಂಕಿ

0
n34371476616401798520747f295336947e4a2a13acfdcf758b7f14b5316cb8367431ad53df8867fa54495e.jpg

ಪಿರಿಯಾಪಟ್ಟಣ: ಶಾಲಾ ಆವರಣದಲ್ಲಿ ನಿಂತಿದ್ದ ಬಸ್ಸೊಂದಕ್ಕೆ ದಿಢೀರನೇ ಬೆಂಕಿ ಹೊತ್ತಿ ಉರಿದ ಘಟನೆ ಬೆಟ್ಟದಪುರದ ಡಿ.ಟಿಎಂಎನ್ ಶಾಲೆಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.

ತಾಲೂಕಿನ ಬೆಟ್ಟದಪುರದ ಡಿ.ಟಿಎಂಎನ್ ಶಾಲೆಯ ಆವರಣದಲ್ಲಿ ನಿಂತಿದ್ದ ಬಸ್ ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ದೊಡ್ಡ ಮಟ್ಟದ ಬೆಂಕಿಯಿಂದ ಬಸ್ ಹೊತ್ತಿಕೊಂಡು ಸುಟ್ಟು ಹೋಗಿದೆ.

ಇದರಿಂದ ಅಕ್ಕಪಕ್ಕದ ಬಸ್ ಗಳಿಗೂ ಸಣ್ಣಪುಟ್ಟ ಹಾನಿ ಉಂಟಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಯಾರಿಗೂ ಪ್ರಾಣಾಪಾಯವಾಗಿಲ್ಲ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!