ಶಿರಾಡಿ ಘಾಟ್ ನಲ್ಲಿ ಭೂ ಕುಸಿತ: ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ
ಸಕಲೇಶಪುರ: ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಭಾರೀ ಮಳೆಯಿಂದಾಗಿ ಮಂಗಳೂರು- ಬೆಂಗಳೂರು ಸಂಪರ್ಕಿಸುವ ಶಿರಾಡಿ ಘಾಟ್ ಹೆದ್ದಾರಿಯಲ್ಲಿ ಈ ಬಾರಿಯೂ ಭೂಕುಸಿತವಾಗಿದ್ದು ವಾಹನ ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದಾರೆ. ಸಕಲೇಶಪುರ ತಾಲ್ಲೂಕಿನ ದೋಣಿಗಲ್ ಮತ್ತು ದೊಡ್ಡತಪ್ಪಲು ಎಂಬಲ್ಲಿ ರಸ್ತೆ ಕುಸಿದಿದ್ದು ಒಂದು ಬದಿಯಲ್ಲಿ ಏಕಮುಖದ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ.
ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ರಸ್ತೆಯ ಎರಡು ಬದಿಗಳಲ್ಲಿ 90 ಡಿಗ್ರಿ ಮಾದರಿಯಲ್ಲಿ ನೂರು ಅಡಿಗಳಷ್ಟು ಗುಡ್ಡವನ್ನು ಅಗೆದಿದ್ದು ಅದೇ ಜಾಗದಲ್ಲಿ ಈಗ ರಸ್ತೆ ಕುಸಿತವಾಗಿದೆ. ಕಳೆದ ಎರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಅಗೆದು ಬಿಟ್ಟಿರುವ ಗುಡ್ಡಗಳಲ್ಲಿ ಮಣ್ಣು ಕುಸಿಯುತ್ತಿದೆ. ಕೆಲವೊಂದು ಕಡೆ ತಡೆಗೋಡೆ ನಿರ್ಮಿಸಿದ್ದರು ಅದರ ಮೇಲಿನಿಂದಲೇ ರಸ್ತೆಗೆ ಮಣ್ಣು ಬಿದ್ದಿದೆ.
ಇದೇ ವೇಳೆ, ಈ ಭಾಗದ ಬೆಟ್ಟಗಳಿಂದ ಮಣ್ಣಿನ ಸಮೇತ ಮರಗಳು ಕೂಡ ನೆಲಕ್ಕೆ ಉರುಳುತ್ತಿದ್ದು ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಾರಿ ಮಳೆಗಾಲ ಆರಂಭದಲ್ಲಿಯೇ ಭೂಕುಸಿತ ಉಂಟಾಗಿದ್ದು ಸಕಲೇಶಪುರ ದೊಡ್ಡತಪ್ಲೆ ಬಳಿ ರಸ್ತೆ ಕುಸಿದು ಕೊಚ್ಚಿ ಹೋಗ ತೊಡಗಿದೆ. ಇಲ್ಲಿ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಕಳೆದ ವರ್ಷವೂ ಇದೇ ಜಾಗದಲ್ಲಿ ಗುಡ್ಡ ಕುಸಿದು ಭಾರೀ ತೊಂದರೆಯಾಗಿತ್ತು. ಸ್ಥಳದಲ್ಲೇ ಜೆಸಿಬಿ, ಹಿಟ್ಯಾಚಿ ಯಂತ್ರಗಳನ್ನು ಇರಿಸಿದ್ದು ಮಳೆಯ ಮಧ್ಯೆ ವಾಹನ ಸಂಚಾರ ಸುಗಮಗೊಳಿಸಲು ಪೊಲೀಸರು ಹರದಾಹಸ ಮಾಡುತ್ತಿದ್ದಾರೆ. ಸದ್ಯಕ್ಕೆ ವಾಹನ ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಕಲೇಶಪುರದ ಆನೆಮಹಲ್ ಬಳಿ ರಸ್ತೆ ಮೇಲೆ ಮಣ್ಣು ಕುಸಿದಿರುವುದನ್ನು ಶಾಸಕ ಸಿಮೆಂಟ್ ಮಂಜು ಸೋಮವಾರ ಬೆಳಗ್ಗೆ ನೋಡಲು ಬಂದಿದ್ದು ಅವರ ಕಣ್ಣೆದುರೇ ಗುಡ್ಡ ಕುಸಿದು ಬಿದ್ದಿದೆ. ರಾಷ್ಟ್ರೀಯ ಹೆದ್ದಾರಿ ರಸ್ತೆಗೆ ಮಣ್ಣು ಕುಸಿದು ಬಿದ್ದಿದ್ದು ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದ ಭೂ ಕುಸಿ




