December 15, 2025

ಬೆಂಗಳೂರಿನಲ್ಲಿ ಯಶಸ್ವಿಯಾಗದ ಕೈ ಶಸ್ತ್ರ ಚಿಕಿತ್ಸೆ ಹಾಸನದ ಜನಪ್ರಿಯ ಆಸ್ಪತ್ರೆಯಲ್ಲಿ ಯಶಸ್ವಿ: ರಸ್ತೆ ಅಪಘಾತದಲ್ಲಿ 7 ವರ್ಷದ ಬಾಲಕಿಯ ಬೇರ್ಪಟ್ಟ ಕೈಯ ಮೂಳೆಗಳನ್ನು ಜೋಡಿಸಿದ ಕಂಬಳಬೆಟ್ಟು ಡಾ. ಅಬ್ದುಲ್ ಬಶೀರ್ ವಿ.ಕೆ ವೈದ್ಯರ ತಂಡ

0
IMG-20250522-WA0004.jpg

ಹಾಸನ: ಇತ್ತೀಚೆಗೆ ಬೆಂಗಳೂರಿನಲ್ಲಿ ಆಟೋ ಮಗುಚಿ ಬಿದ್ದು ಆದಂತಹ ರಸ್ತೆ ಅಪಘಾತದಲ್ಲಿ 7 ವರ್ಷದ ಬಾಲಕಿಯ ಕೈ ಮೇಲೆ ಬಿದ್ದುದ್ದರಿಂದ ಬಲಮುಂಗೈ ನುಚ್ಚು ನೂರಾಗಿತ್ತು. ಸುಮಾರು ಐದು ದಿನಗಳ ಕಾಲ ಬೆಂಗಳೂರಿನ ಎರಡು ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ತೆಗೆದುಕೊಂಡು ಫಲಕಾರಿಯಾಗದೆ ಕೈಯನ್ನು ಕತ್ತರಿಸಿ ತೆಗೆಯಬೇಕು ಎಂದು ಹೇಳಿದ ಸಂದರ್ಭದಲ್ಲಿ ನಿರಾಶಿತವಾದ ಪೋಷಕರು ಅವರ ಹಿರೀಸಾವೆಯ ಸಂಬಂಧಿಕರ ಸಲಹೆ ಮೇರೆಗೆ ಹಾಸನದ ಜನಪ್ರಿಯ ಆಸ್ಪತ್ರೆಗೆ ದಾಖಲಾದಾಗ ಯಶಸ್ವಿಯಾಗಿ ಚಿಕಿತ್ಸೆ ನಡೆದು ಗುಣಮುಖರಾಗುತ್ತಿದ್ದಾರೆ ಎಂದು ಜನಪ್ರಿಯ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ವಿ.ಕೆ. ಅಬ್ದುಲ್ ಬಷೀರ್ ತಿಳಿಸಿದರು.

ಕೆ.ಆರ್. ಪುರಂನಲ್ಲಿರುವ ತನ್ನ ಜನಪ್ರಿಯ ಆಸ್ಪತ್ರೆಯ ಸಭಾಂಗಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ೭ ವರ್ಷದ ಬಾಲಕಿಯ ಕೈ ಮುಂಗೈನ ಮಧ್ಯದಿಂದ ಕೆಳಗಡೆ ಭಾಗ ಸಂಪೂರ್ಣ ಜಜ್ಜಿ ಮೂಳೆಗಳು ನರಗಳು ಮಾಂಸ ಖಂಡಗಳು ಬೇರ್ಪಟ್ಟು ಬಿದ್ದು ಹೋಗಿದ್ದವು. ನಂತರ ಬೇರೆ ಬೇರೆ ರೀತಿಯ ನರಗಳಿಗೆ ಹಾಗೂ ಮಾಂಸಖಂಡಗಳಿಗೆ ಶಸ್ತ್ರ ಚಿಕಿತ್ಸೆ ಮಾಡಿ ಹಾಗೂ ಕೃತಕ ಮೂಳೆಯನ್ನು ಜೋಡಣೆ ಮಾಡಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಿ ಬಾಲಕಿಯ ಕೈಯನ್ನು ಉಳಿಸಲಾಯಿತು. ಬಾಲಕಿಯು ಈಗ ಕೈಯನ್ನು ಆಡಿಸುತ್ತಿದ್ದು, ಕೈ ಬೆರಳುಗಳ ಚಲನವಲನೆಗಳು ಮಾಡಲು ಸಾಧ್ಯವಾಗುತ್ತಿದೆ. ಈಗಾಗಲೇ ಮೂರು ಶಸ್ತ್ರಚಿಕಿತ್ಸೆಗಳು ಆಗಿದ್ದು, ನಂತರ ಮುಂದಿನ ದಿನಗಳಲ್ಲಿ ಶಸ್ತ್ರ ಚಿಕಿತ್ಸೆಯ ಅವಶ್ಯಕತೆ ಇದೆ ಮತ್ತು ೮೦ ರಷ್ಟು ಕೈ ಗುಣಮುಖವಾಗುವ ಸಾಧ್ಯತೆ ಇದೆ ಎಂದರು.

ಈ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ನಾವು ಮತ್ತು ಕೀಲು ಮತ್ತು ಮೂಳೆ ತಜ್ಞರಾದ ಡಾ. ರಜತ್, ಡಾ. ತ್ರಿವಿಕ್ರಂ, ಡಾ. ನುಮಾನ್ ಪ್ಲಾಸ್ಟಿಕ್ ಸರ್ಜನ್ ಡಾ. ನಿಖಿಲ್ ಶೆಟ್ಟಿ ಅರವಳಿಕೆ ಹಾಗೂ ಐ.ಸಿ.ಯು. ತಜ್ಞರಾದ ಡಾ. ಸುಹಾಸ್ ಅವರ ತಂಡದಿಂದ ಹಾಗೂ ಜನರಲ್ ಫಿಜಿಶಿಯನ್ ಡಾ.ಮನೋಜ್ ಕುಮಾರ್, ನರರೋಗ ತಜ್ಞರಾದ ಡಾ. ಹರ್ಷ ಸುರೇಶ್ ರವರ ಸಹಾಯದೊಂದಿಗೆ ಯಶಸ್ವಿಯಾಗಿ ನಡೆಸಲಾಯಿತು ಎಂದು ಹೇಳಿದರು.

ಮತ್ತೊಂದು ಘಟನೆಯಲ್ಲಿ ಸಂಪೂರ್ಣ ಒಡೆದು ಹೋದ ಹೊಟ್ಟೆಗೆ ಅಪರೂಪದ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ಹಾಸನದ ಜನಪ್ರಿಯ ಆಸ್ಪತ್ರೆಯಲ್ಲಿ ಕೊಡಲಾಗಿದೆ. ಇತ್ತೀಚೆಗೆ ಸಕಲೇಶಪುರದ ಹತ್ತಿರ ಟೈಯರ್ ಕಾರ್ಖಾನೆಯಲ್ಲಿ ಕೆಲಸ ಮಾಡುವಾಗ ಭಾರವಾದ ಯಂತ್ರದ ಬ್ಲೇಡ್ ಹೊಟ್ಟೆಗೆ ಬಿದ್ದು ಹೊಟ್ಟೆ ಒಡೆದು ಹೋಗಿ ಸಂಪೂರ್ಣ ಐದರಿಂದ ಆರು ಮೀಟರ್ ನಷ್ಟು ಕರಳು ಹೊರಗೆ ಬಂದಾಗ ಹಾಸನದ ಜನಪ್ರಿಯ ಆಸ್ಪತ್ರೆಗೆ ತರಲಾಯಿತು. ತೀವುನಿಗಾ ವಿಭಾಗದಲ್ಲಿ ಉಸಿರಾಡಲು ತೊಂದರೆಯಾದಾಗ ಸುಮಾರು ಐದು ಬಾಟಲ್ ಗಿಂತ ಹೆಚ್ಚು ರಕ್ತವನ್ನು ಹಾಕಿ ಹೃದಯ ಮತ್ತು ಶ್ವಾಸಕೋಶ ಪುನರ್ ಚೇತರಿಸುವಂತೆ ಮಾಡಿ ಸುಮಾರು ೬ ಗಂಟೆಗಳ ಶಸ್ತ್ರ ಚಿಕಿತ್ಸೆಂಮಾಡಲಾಯಿತು. ಯಶಸ್ವಿ ಶಸ್ತ್ರ ಚಿಕಿತ್ಸೆ ಮೂಲಕ ರೋಗಿಯನ್ನು ಉಳಿಸುವುದು ಮಾತ್ರವಲ್ಲದೆ ಕರಳನ್ನು ಯಶಸ್ವಿಯಾಗಿ ಜೋಡಿಸಲಾಯಿತು ಎಂದು ಹೇಳಿದರು.

ಈ ಶಸ್ತ್ರ ಚಿಕಿತ್ಸೆಯನ್ನು ಜನಪ್ರಿಯ ಆಸ್ಪತ್ರೆಯ ಶಸ್ತ್ರ ಚಿಕಿತ್ಸೆ ವಿಭಾಗದ ಮುಖ್ಯಸ್ಥರಾದ ಡಾ. ಪ್ರವೀಣ್ ಮತ್ತು ತಂಡ ಹಾಗೂ ಅರವಳಿಕೆ ಮತ್ತು ಐಸಿಯು ತಜ್ಞರಾದ ಡಾ. ಸುಹಾಸ್ ರವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಸಲಾಯಿತು ರೋಗಿಯು ಚೇತರಿಸಿಕೊಂಡು ಈಗ ಆಹಾರವನ್ನು ಸಾಮಾನ್ಯರಂತೆ ಸೇವಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಯಶಸ್ವಿಯಾಗಿ ರೋಗಿಗಳಿಗೆ ಚಿಕಿತ್ಸೆ ನೀಡಿದ ಎಲ್ಲಾ ವೈದ್ಯರು ಇದೆ ವೇಳೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!