ಕಾಸರಗೋಡು: ಕೆರೆಯಲ್ಲಿ ಮುಳುಗಿ ಇಬ್ಬರು ಮಕ್ಕಳು ಮೃತ್ಯು, ಓರ್ವ ಗಂಭೀರ
ಕಾಸರಗೋಡು: ಕೆರೆಯಲ್ಲಿ ಮುಳುಗಿ ಇಬ್ಬರು ಮಕ್ಕಳು ಮೃತಪಟ್ಟ ದಾರುಣ ಘಟನೆ ಕಾಞಾಂಗಾಡ್ ನ ಮಾಣಿಕ್ಕೋತ್ ನಲ್ಲಿ ಇಂದು ಸಂಜೆ ನಡೆದಿದೆ.
ಓರ್ವನ ಸ್ಥಿತಿ ಗಂಭೀರವಾಗಿದೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪಾಲೆಕ್ಕಿ ಅಝೀಝ್ ರವರ ಪುತ್ರ ಆಫಾಝ್(9) ಹಾಗೂ ಹೈದರ್ ರವರ ಪುತ್ರ ಅನ್ವರ್ (11) ಮೃತಪಟ್ಟ ಮಕ್ಕಳು.
ಅನ್ವರ್ ನ ಸಹೋದರ ಹಾಶಿಮ್ ನನ್ನು ಗಂಭೀರ ಸ್ಥಿತಿಯಲ್ಲಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಜೆ 4 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಮಾಣಿಕ್ಕೋತ್ ಪಾಲೆಕ್ಕಿ ಮಸೀದಿಯ ಕೆರೆಯಲ್ಲಿ ಸ್ನಾನಕ್ಕಿಳಿದ ಸಂದರ್ಭದಲ್ಲಿ ಘಟನೆ ನಡೆದಿದೆ.
ಮಾಹಿತಿ ತಿಳಿದು ನಾಗರಿಕರು, ಅಗ್ನಿ ಶಾಮಕ ದಳದ ಸಿಬ್ಬಂದಿಗಳು, ಪೊಲೀಸರು ಮಕ್ಕಳನ್ನು ಹೊರತೆಗೆದರೂ ಇಬ್ಬರು ಮೃತಪಟ್ಟಿದ್ದರು. ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.




