ಮಹಾರಾಷ್ಟ್ರದ ಉದ್ಯಮಿಯ ಕಾರು ಅಡ್ಡಗಟ್ಟಿ ದರೋಡೆ: ವಿಟ್ಲ ಮೂಲದ ಆರೋಪಿ ಮನೆಗೆ ಕಾರವಾರ ಪೊಲೀಸರಿಂದ ದಾಳಿ
ವಿಟ್ಲ: ಮಹರಾಷ್ಟ್ರ ಮೂಲದ ಉದ್ಯಮಿಯ ಕಾರನ್ನು ಅಡ್ಡಗಟ್ಟಿ ಕಳ್ಳತನ ಮಾಡಿದ ಪ್ರಕರಣದ ಆರೋಪಿಗಳ ಪೈಕಿ ಓರ್ವನ ಮನೆ ಕೇಪು ಕಲ್ಲಂಗಳದಲ್ಲಿದ್ದು, ಮಂಗಳವಾರ ಕಾರವಾರ ಪೊಲೀಸರು ವಿಟ್ಲ ಪೊಲೀಸರ ಸಹಕಾರದೊಂದಿಗೆ ತನಿಖೆ ನಡೆಸಿದ್ದಾರೆ.
ಈ ಪ್ರಕರಣ ಸಂಬಂಧಿಸಿದಂತೆ ಒಟ್ಟು ೧೧ ಮಂದಿಯ ಭಾಗಿಯಾದ ಬಗ್ಗೆ ಶಂಖೆಯ ಮೇರೆಗೆ ಪೊಲೀಸ್ ಇಲಾಖೆ ತನಿಖೆಗೆ ಮುಂದಾಗಿದ್ದು, ೮ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ೩ಮಂದಿ ವಿದೇಶಕ್ಕೆ ಪಲಾಯನ ಮಾಡಿದ್ದು, ಕೇಪು ಕಲ್ಲಂಗಳ ನಿವಾಸಿ ಮಹಮ್ಮದ್ ಇಸಾಮ್ ಓರ್ವನಾಗಿದ್ದಾನೆ.
ಇಸಾಮ್ ಮನೆಯನ್ನು ಪೊಲೀಸರು ಸರ್ಚ್ ವಾರೆಂಟ್ ಮೇಲೆ ಪರಿಶೀಲನೆ ನಡೆಸಿ ಮಾಹಿತಿಗಾಗಿ ತಡಕಾಡಿದ್ದಾರೆ. ಸುಮಾರು ೨ ತಾಸಿಗೂ ಅಧಿಕ ಕಾಲ ತನಿಖೆಯನ್ನು ನಡೆಸಿದ್ದಾರೆಂಬ ಮಾಹಿತಿಯಿದೆ. ಮನೆಯವರ ಜತೆಗೆ ಸಂಪರ್ಕ ಹಾಗೂ ಆತನ ವಿವಿಧ ಮಾಹಿತಿಯನ್ನು ಈ ಸಂದರ್ಭ ಸಂಗ್ರಹಿಸಿದ್ದಾರೆನ್ನಲಾಗಿದೆ.





