December 16, 2025

ಧರ್ಮಸ್ಥಳ ಮೂಲದ ಯುವತಿ ಪಂಜಾಬ್ ನಲ್ಲಿ ನಿಗೂಢವಾಗಿ ಸಾವು

0
image_editor_output_image-210254413-1747546673088

ಧರ್ಮಸ್ಥಳ ಮೂಲದ ಯುವತಿಯೊಬ್ಬರು ಪಂಜಾಬ್ ನಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಏರೋಸ್ಪೇಸ್ ನ ಉದ್ಯೋಗಿ ಆಕಾಂಕ್ಷಾ ಎಸ್.ನಾಯರ್ (22) ಮೃತ ಯುವತಿ. 6 ತಿಂಗಳಿಂದ ದೆಹಲಿಯಲ್ಲಿ ಏರೋಸ್ಪೇಸ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಆಕಾಂಕ್ಷಾ ನಿನ್ನೆ ಕಾಲೇಜು ಸರ್ಟಿಫಿಕೇಟ್ ತರಲೆಂದು ಪಂಜಾಬ್ ಗೆ ತೆರಳಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಆಕಾಂಕ್ಷಾ ನಾಯರ್ ಪಂಜಾಬ್ ನ ಎಲ್.ಸಿ.ಯು ಪಗ್ವಾಡ ಕಾಲೇಜಿನಲ್ಲಿ ಓದಿದ್ದರು. ಈ ಹಿನ್ನೆಲೆಯಲ್ಲಿ ಸರ್ಟಿಫಿಕೇಟ್ ತರಲೆಂದು ಹೋಗಿದ್ದರು. ಉದ್ಯೋಗಕ್ಕಾಗಿ ಜಪಾನ್ ಗೆ ತೆರಳಲು ಆಕಾಂಕ್ಷಾ ಪ್ಲಾನ್ ಮಾಡಿದ್ದರು. ಇದಕ್ಕಾಗಿ ಸರ್ಟಿಫಿಕೇಟ್ ಗಾಗಿ ಪಂಜಾಬ್ ಪಗ್ವಾಡಾ ಕಾಲೇಜಿಗೆ ಹೋಗಿ ಸರ್ಟಿಫಿಕೇಟ್ ಪಡೆದಿದ್ದರು.

ಸರ್ಟಿಫಿಕೇಟ್ ಪಡೆದ ಬಳಿಕ ಮನೆಗೆ ಕರೆ ಮಾಡಿದ್ದ ಆಕಾಂಕ್ಷಾ ಆ ಬಳಿಕ ನಿಗೂಢವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮಗಳ ಸಾವಿನ ಬಗ್ಗೆ ಜಲಂಧರ್ ಪೊಲೀಸರು ಪೋಷಕರಿಗೆ ಮಾಹಿತಿ ನೀಡಿದ್ದಾರೆ.

3ನೇ ಮಹಡಿಯಿಂದ ಬಿದ್ದು ಆಕಾಂಕ್ಷಾ ಮೃತಪಟ್ಟಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ನಿನ್ನೆಯೇ ಆಕಾಂಕ್ಷಾ ಪೋಷಕರು ಪಂಜಾಬ್ ಗೆ ತೆರಳಿದ್ದಾರೆ.ಆಕಾಂಕ್ಷಾ ತಂದೆ ಮಗಳ ಸಾವು ಕೊಲೆಯಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!