March 12, 2026

ಕುವೆಟ್ಟು ಗ್ರಾ.ಪಂ. ಅಧ್ಯಕ್ಷೆ ಭಾರತಿ ಶೆಟ್ಟಿಯ ವಿವಾದಿತ ಭಾಷಣದ ವಿರುದ್ಧ SDTU ವತಿಯಿಂದ ದೂರು ದಾಖಲು

0
IMG-20250513-WA0001.jpg

ಬೆಳ್ತಂಗಡಿ: ಗುರುವಾಯನಕೆರೆಯ ಬಂಟರ ಭವನದಲ್ಲಿ ನಡೆದ “ಸುಹಾಸ್ ಶೆಟ್ಟಿ ನುಡಿ ನಮನ” ಕಾರ್ಯಕ್ರಮದಲ್ಲಿ ಕುವೆಟ್ಟು ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿಯವರು ಮುಸ್ಲಿಂ ಆಟೋ ಚಾಲಕರ ಬಗ್ಗೆ ಹಿಂದೂ ಮುಸ್ಲಿಂ ವಿಭಜಿಸಿ ಕೋಮು ಭಾವನೆಯನ್ನು ಕೆರಳಿಸಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತಂದಿರುವುದರ ಬಗ್ಗೆ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕಾಗಿ ಸೋಶಿಯಲ್ ಟ್ರೇಡ್ ಯೂನಿಯನ್ ಗುರುವಾಯನಕೆರೆ ಇದರ ಅಧ್ಯಕ್ಷರಾದ ಅಬ್ದುಲ್ ರಹಮಾನ್ ರವರು ಬೆಳ್ತಂಗಡಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದರು.

ಮುಸ್ಲಿಂ ಆಟೋ ರಿಕ್ಷಾ ಚಾಲಕರ ಬಗ್ಗೆ ಹಾಗೂ ಮುಸ್ಲಿಂ ಅಂಗಡಿಯಗಳಲ್ಲಿ ವ್ಯಾಪಾರ-ವ್ಯವಹಾರ ಬಹಿಷ್ಕರಿಸುವಂತೆ, ಒಂದು ಸಮುದಾಯವನ್ನು ಇನ್ನೊಂದು ಸಮುದಾಯದ ವಿರುದ್ಧ ಎತ್ತಿ ಕಟ್ಟಿ ಸಮಾಜವನ್ನು ಹಿಂದು-ಮುಸ್ಲಿಂ ಎಂದು ವಿಭಜಿಸಿ ಕೋಮು ಭಾವನೆಯನ್ನು ಕೆರಳಿಸಿ, ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆಗೆ ದಕ್ಕೆ ತರುವಂತಹ ಭಾಷಣವನ್ನು ಮಾಡಿರುವವರ ವಿರುದ್ದ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ದೂರಿನಲ್ಲಿ, ದಿನಾಂಕ: 11-05-2025 ರಂದು ಗುರುವಾಯನಕೆರೆ ಬಂಟರ ಭವನ ಎಂಬಲ್ಲಿ “ಸುಹಾಸ್ ಶೆಟ್ಟಿಗೆ ನುಡಿನಮನ” ಎಂಬ ಕಾರ್ಯಕ್ರಮದಲ್ಲಿ ಕುವೆಟ್ಟು ಗ್ರಾಮ ಪಂಚಾಯತ್ ಇದರ ಅಧ್ಯಕ್ಷರಾದ ಭಾರತಿ ಶೆಟ್ಟಿ ಎಂಬವರು ಭಾಷಣ ಮಾಡುತ್ತಾ “ಗುರುವಾಯನಕೆರೆಯಲ್ಲಿ ಮುಸ್ಲಿಮರ ಸಂಖ್ಯೆ ಜಾಸ್ತಿ, ಮುಸ್ಲಿಮರಲ್ಲಿ ವ್ಯಾಪಾರ ಮಾಡಬಾರದು, ಮುಸ್ಲಿಂ ವ್ಯಕ್ತಿಗಳ ಆಟೋ ರಿಕ್ಷಾವನ್ನು ಉಪಯೋಗಿಸಾರದು. ಮುಸ್ಲಿಮರ ಜೊತೆಗಿನ ವ್ಯಾಪಾರ-ವ್ಯವಹಾರವನ್ನು ಬಹಿಷ್ಕರಿಸುವಂತೆ ಬಹಿರಂಗವಾಗಿ ಕರೆಯನ್ನು ನೀಡುತ್ತಾ, ಕೋಮು-ಸೌರ್ಹಾಧವನ್ನು ಕೆಡಿಸುವಂತಹ ಭಾಷಣವನ್ನು ಮಾಡಿರುತ್ತಾರೆ. ಅದೂ ಅಲ್ಲದೇ ಗುರುವಾಯನಕೆರೆ ವ್ಯಾಪ್ತಿಯಲ್ಲಿ ಆಟೋ ರಿಕ್ಷಾದಲ್ಲಿ ಕಷ್ಟಪಟ್ಟು ದುಡಿಯುವಂತಹ ಮುಸ್ಲಿಂ ಆಟೋ ಚಾಲಕರ ಬಗ್ಗೆ ಇಲ್ಲ-ಸಲ್ಲದ ಆರೋಪಗಳನ್ನು ಮಾಡುತ್ತಾ, ಹಿಂದುಗಳು ಮುಸ್ಲಿಮರ ಆಟೋಗಳನ್ನು ಉಪಯೋಗಿಸದಂತೆ ಕರೆ ನೀಡಿರುತ್ತಾರೆ. ಇವರ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಜರಗಿಸಬೇಕೆಂದು ಆಗ್ರಹಿಸಿದ್ದಾರೆ.

ಈ ಸಂಧರ್ಭದಲ್ಲಿ SDTU ಘಟಕದ ಇದರ ಪದಾಧಿಕಾರಿಗಳು ಹಾಗು ಹಿರಿಯ ಆಟೋ ಚಾಲಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!