May 4, 2026

ಬೈಕ್ ಗೆ ಲಾರಿ ಡಿಕ್ಕಿ ಹೊಡೆದು ಭೀಕರ ರಸ್ತೆ ಅಪಘಾತ: ಮೂವರು ಬಾಲಕರು ಮೃತ್ಯು

0
n66347288617466885222502909a8a5029ea1e4aef3087b9b4ff0d3958d05b3bdfbd385104cfdf3bb103b54.jpg

ಬಾಗಲಕೋಟೆ: ಭೀಕರವಾದ ಅಪಘಾತ ಸಂಭವಿಸಿದ್ದು, ಲಾರಿ ಡಿಕ್ಕಿಯಾಗಿ ಬೈಕ್ ನಲ್ಲಿ ತೆರಳುತ್ತಿದ್ದ ಮೂವರು ಬಾಲಕರು ಸ್ಥಳದಲ್ಲಿ ಸಾವನಪ್ಪಿರುವ ಘಟನೆ ಬಾಗಲಕೋಟೆ ತಾಲೂಕಿನ ಸೀಮಿಕೇರಿ ಬೈಪಾಸ್ ನಲ್ಲಿ ಸಂಭವಿಸಿದೆ.

ಅಪಘಾತದಲ್ಲಿ ಮೃತಪಟ್ಟವರು ಮೂವರು ಎಲ್ಲರೂ ಬಾಲಕರು ಎಂದು ತಿಳಿದು ಬಂದಿದ್ದು, ಬಾಲಕರು ಗದ್ದನಕೆರೆ ಕ್ರಾಸ್ ನಿಂದ ಹುಬ್ಬಳ್ಳಿ ಮಾರ್ಗವಾಗಿ ಬೈಕ್ ನಲ್ಲಿ ತೆರಳುತ್ತಿದ್ದರು ಈ ವೇಳೆ ಲಾರಿ ಡಿಕ್ಕಿಯಾಗಿ ಬೈಕಿನಲ್ಲಿದ್ದ ಮೂವರು ಬಾಲಕರು ಸಾವನ್ನಪ್ಪಿದ್ದಾರೆ.

ಮೃತರನ್ನು ಮರನಾಳ ಗ್ರಾಮದ ನಿವಾಸಿಗಳಾದ ಸಿದ್ದು (16), ಸಂತೋಷ (16) ಮತ್ತು ಕಾಮಣ್ಣ (16) ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಕಲಾದಗಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!