May 4, 2026

ಜಿ.ಎಚ್.ಫೌಂಡೇಶನ್(ರಿ) ಇದರ ವತಿಯಿಂದ ಹಜ್ಜ್ ಯಾತ್ರೆಗೆ ತೆರಳುತ್ತಿರುವವರಿಗೆ ಬೀಳ್ಕೊಡುಗೆ ಹಾಗೂ ವಿದ್ಯಾರ್ಥಿನಿಗೆ ಸನ್ಮಾನ ಕಾರ್ಯಕ್ರಮ

0
image_editor_output_image1692204214-1746376851347

ಜಿ.ಎಚ್.ಫೌಂಡೇಶನ್(ರಿ) ಇದರ ವತಿಯಿಂದ ಹಜ್ಜ್ ಯಾತ್ರೆಗೆ ತೆರಳುತ್ತಿರುವವರಿಗೆ ಬೀಳ್ಕೊಡುಗೆ ಹಾಗೂ ವಿದ್ಯಾರ್ಥಿನಿಗೆ ಸನ್ಮಾನ ಕಾರ್ಯಕ್ರಮ ದಿನಾಂಕ 04-05-2025 ರ ಆದಿತ್ಯವಾರ ಬೆಳಿಗ್ಗೆ 7.30ಕ್ಕೆ ಸರಿಯಾಗಿ ಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ನಡೆಯಿತು.


ಪ್ರಸಕ್ತ ಸಾಲಿನಲ್ಲಿ ಪವಿತ್ರ ಹಜ್ ಯಾತ್ರೆಗೆ ತೆರಳುತ್ತಿರುವ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಜ!‌ಮೊಹಮ್ಮದ್ ಶಾಲಿ ಹಾಗೂ ಮೊಹಿಯುಧ್ಧೀನ್ ಜುಮಾ ಮಸೀದಿ ಮೂಲರಪಟ್ಣ ಇದರ ಉಪಾಧ್ಯಕ್ಷರಾದ ಜ! ಅಹಮದ್ ಬಾವಾ ವಾರಟೀಲು ಇವರಿಗೆ ಗೌರವದ ಸನ್ಮಾನ ದೊಂದಿಗೆ ಬೀಳ್ಕೊಡಲಾಯಿತು.
ಈ ಶೈಕ್ಷಣಿಕ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ  611ಅಂಕ ಗಳಿಸಿದ ಕರ್ನಾಟಕ ಪಬ್ಲಿಕ್ ಶಾಲೆ ಮುತ್ತೂರು ಇದರ ವಿದ್ಯಾರ್ಥಿನಿ ಆಯಿಷ ಆಶ್ಮೀನ್ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಜಿ.ಎಚ್.ಫೌಂಡೇಶನ್(ರಿ) ಇದರ ಗೌರವಾನ್ವಿತ ಅಧ್ಯಕ್ಷರಾದ ಜ! ಎಮ್ ಬಿ ಇಸ್ಮಾಯಿಲ್ ಶಾಫಿ,ಮಾಜಿ ಅಧ್ಯಕ್ಷರಾದ ಜ! ಮೊಹಮ್ಮದ್ ಶಾಲಿ ಎಮ್ ಎಸ್, ಸ್ಥಾಪಕಾಧ್ಯಕ್ಷ ಹಂಝ ಗುತ್ತು ಗೌರವ ಸಲಹೆಗಾರರಾದ ಹಾಜಿ.ಎಮ್.ಬಿ ಅಶ್ರಫ್,ಸಜೀವುದ್ದೀನ್ ಎಮ್ ಎಸ್, ತೌಹೀದ್ ಎಮ್ ಬಿ, ರಝಾಕ್ ದುಬೈ,ಶಾಹುಲ್ ಹಮೀದ್,ಮುನೀರ್ ಅಝಾದ್ ನಗರ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜ! ಶಿಹಾಬುಧ್ಧೀನ್ ಎಚ್ ಹಾಗೂ ಹಲವಾರು ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!