December 15, 2025

ಸುಳ್ಯ: ಸಂಪಾಜೆ ಹೊಳೆಗೆ ಬಿದ್ದು ಮಹಿಳೆ ಸಾವು

0
image_editor_output_image1788219340-1746011369214.jpg

ಸುಳ್ಯ: ಸಂಪಾಜೆ ಗ್ರಾಮದ ಕೊಯನಾಡಿನಲ್ಲಿ ಹೊಳೆಗೆ ಬಿದ್ದು ಮಹಿಳೆ ಮೃತಪಟ್ಟ ಘಟನೆ ಏ.29 ರಂದು ಮಧ್ಯಾಹ್ನ ಸಂಭವಿಸಿದೆ.ಮೃತ ಮಹಿಳೆಯನ್ನು ದಿ. ಅಣ್ಣು ದಾಸ್ ಅವರ ಧರ್ಮ ಪತ್ನಿ ಯಶೋದ ದಾಸ್ (60 ವ.) ಎಂದು ಗುರುತಿಸಲಾಗಿದೆ.

ಅವರಿಗೆ ಕೆಲವು ವರ್ಷಗಳ ಹಿಂದೆ ಸ್ಟೋಕ್ ಮತ್ತುಹೃದಯ ಸಂಬಂಧಿತ ಕಾಯಿಲೆ ಇದ್ದು, ಮಂಗಳೂರಿನ ಯೂನಿಟಿ ಆಸ್ಪತ್ರೆಯಲ್ಲಿ ಆಪರೇಶನ್ ಮಾಡಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಮನೆಗೆ ಕರೆದುಕೊಂಡು ಬರಲಾಗಿತ್ತು.

ಇಂದು ತನ್ನ ಮಗನಾದ ಉಮೇಶ್ ಅವರ ಜೊತೆ ಇವತ್ತು ಊಟಕ್ಕೆ ಕೋಳಿ ಸಾರು ಮಾಡಲು ಕೋಳಿಯನ್ನು ತರಲು ಹೇಳಿದ್ದಾರೆನ್ನಲಾಗಿದೆ. ಮಗ ಚಡಾವಿಗೆ ಹೋಗಿ ಕೋಳಿ ಮಾಂಸ ತಂದು ಮನೆಗೆ ಬಂದು ನೋಡಿದಾಗ, ಮಹಿಳೆ ಮನೆಯಲ್ಲಿ ಇರಲಿಲ್ಲ.

ಕೂಡಲೇ ಅಕ್ಕ ಪಕ್ಕದವರ ಮನೆಯವರಿಗೆ ವಿಷಯವನ್ನು ತಿಳಿಸಿದ್ದು, ಹುಡುಕಾಟದಲ್ಲಿ ಮನೆಯ ಪಕ್ಕದ ಹೊಳೆಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಸಂಪಾಜೆ ಪೋಲಿಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!