ಉಪ್ಪಿನಂಗಡಿ: ಲಾರಿಯೊಂದು ಮಗುಚಿ ಬಿದ್ದ ಪರಿಣಾಮ ಲಾರಿ ಚಾಲಕ ಗಾಯಗೊಂಡ ಘಟನೆ ಉಪ್ಪಿನಂಗಡಿಯ 34ನೇ ನೆಕ್ಕಿಲಾಡಿ ಎಂಬಲ್ಲಿ ನಡೆದಿದೆ.
ತಂಪು ಪಾನೀಯ ಸಾಗಾಟದ ಈ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಒಂದು ಪಾರ್ಶ್ವಕ್ಕೆ ಮಗುಚಿ ಬಿದ್ದಿದೆ. ಬಳಿಕ ಲಾರಿಯಲ್ಲಿದ್ದ ಪಾನೀಯಗಳನ್ನು ಬದಲಿ ವಾಹನಕ್ಕೆ ವರ್ಗಾಯಿಸಿ, ಬಳಿಕ ಲಾರಿಯನ್ನು ಮೇಲೆತ್ತಲಾಯಿತು.