ಮಂಗಳೂರು: ಗುಂಪಿನಿಂದ ಹತ್ಯೆಯಾದ ಯುವಕ ಉಗ್ರ ಸಂಘಟನೆಗೆ ಸೇರಿರಬಹುದು: ಮಾಜಿ ಡಿವೈಎಸ್‌ಪಿ ಅನುಪಮಾ ಶೆಣೈ ವಿವಾದಾತ್ಮಕ ಹೇಳಿಕೆ
ಮಂಗಳೂರು : ಮಂಗಳೂರಿನ ಕುಡುಪು ಸಮೀಪ ಯುವಕರ ಗುಂಪಿನಿಂದ ಹತ್ಯೆಯಾದ ಯುವಕ ಯಾವುದೋ ಉಗ್ರ ಸಂಘಟನೆಗೆ ಸೇರಿರಬಹುದು ಅಥವಾ ನಿಷೇಧಿತ ಸಂಘಟನೆಯ ಕಾರ್ಯಕರ್ತನಾಗಿರಬಹುದು ಎಂಬುದಾಗಿ ಮಾಜಿ ಡಿವೈಎಸ್‌ಪಿ ಅನುಪಮಾ ಶೆಣೈ ವಿವಾದಾತ್ಮಕ ಹೇಳಿಕೆ ಮಾಡಿದ್ದಾರೆ.
ಸುದ್ದಿಗೊಷ್ಟಿಯಲ್ಲಿ ಮಾತನಾಡಿ, ಮಂಗಳೂರಿನಲ್ಲಿ ಎನ್‌ಐಎ ಕಚೇರಿ ತೆರೆಯಲು ಸೂಕ್ತ ಸಮಯ ಅಂತ ಹೇಳಿದ್ದಾರೆ. ಇಲ್ಲವಾದಲ್ಲಿ ಯು.ಟಿ.ಖಾದರ್ ಅವರ ಮೇಲೆ ದಾಳಿಯಾದ್ರೆ ಕಷ್ಟವಾಗಬಹುದು ಅಂತ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹ್ಯುಬ್ಲೆಟ್ ವಾಚ್ ವಿಚಾರವಾಗಿ ಇಡಿ ತನಿಖೆ ಏನಾಗಿದೆ ಎಂಬ ವಿಚಾರವನ್ನು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಜನರಿಗೆ ತಿಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಅಷ್ಟೇ ಅಲ್ಲದೆ, ನಿವೃತ್ತ ಡಿಜಿ ಐಜಿಪಿ ಓಂ ಪ್ರಕಾಶ್ ಅವರ ಕೊಲೆ ಪಿಎಫ್‌ಐನವರಿಂದ ಆಗಿದೆ. ಹೀಗಾಗಿ ಈ ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇದು ಸಿಎಂ ಪಿಎಫ್‌ಐ ಅವರನ್ನು ಪೋಷಿಸುತ್ತಿರುವ ಕಾರಣದಿಂದ ಆಗಿದ್ದು, ಡಿಜಿ ಐಜಿಪಿ ಕೊಲೆಯಲ್ಲಿ ಪಿಎಫ್‌ಐ ನೇರ ಪಾತ್ರ ಇದೆ ಎಂದು ಆರೋಪಿಸಿದ್ದಾರೆ.





