ವಿಟ್ಲ; ಒಕ್ಕೆತ್ತೂರು ನೂರುಲ್ ಹುದಾ ಎಜುಕೇಶನಲ್ ಸಂಸ್ಥೆಯ ನೂತನ ದರ್ಸ್ ಕಟ್ಟಡ ಉದ್ಘಾಟನೆ.
ವಿಟ್ಲ: ಒಕ್ಕೆತ್ತೂರು ನೂರುಲ್ ಹುದಾ ಎಜುಕೇಶನ್ ಸಂಸ್ಥೆಯ ನೂತನ ದರ್ಸ್ ಕಟ್ಟಡ ಉದ್ಘಾಟನಾ ಸಮಾರಂಭವು ಬಹಳ ವಿಜೃಂಭಣೆಯಿಂದ ನಡೆಯಿತು.
ಕುಟ್ಯಾಡಿ ಸಿರಾಜುಲ್ ಹುದಾ ಎಜುಕೇಶನ್ ಸಂಸ್ಥೆಯ ಸಾರಥಿ ಶೈಖುನಾ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಉಸ್ತಾದ್ ಉದ್ಘಾಟಿಸಿ,ದರ್ಸ್ ಶಿಕ್ಷಣದ ಅಗತ್ಯ,ವ್ಯವಸ್ಥೆ,ಅನಿವಾರ್ಯತೆ ಬಗ್ಗೆ ಮಾತನಾಡಿದರು.
ಶೈಖುನಾ ಶಿಹಾಬುದ್ದೀನ್ ತಂಙಳ್ ಮದಕ,ಶೈಖುನಾ ಮಹಮೂದಲ್ ಫೈಝಿ ವಾಲೆಮುಂಡೋವು, ಇಬ್ರಾಹಿಂ ಕಾಮಿಲ್ ಸಖಾಫಿ ಬಾಯಾರ್ , ಎಣ್ಮೂರು ಉಸ್ತಾದ್,ಮಾಜಿ ಸಚಿವ ರಮನಾಥ ರೈ ಉಕ್ಕುಡ ಮುದರ್ರಿಸ್ ಹಾಪಿಳ್ ಅಹಮದ್ ಶರೀಫ್ ಸಖಾಫಿ,,ಅಬೂಬಕರ್ ಫೈಝಿ ಪೆರುವಾಯಿ,ಡಿ.ಕೆ.ಉಮರ್ ಸಖಾಫಿ ಕಂಬಳಬೆಟ್ಟು,ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಎಂ.ಎಸ್.ಮಹಮ್ಮದ್, ಇಸ್ಮಾಯಿಲ್ ಶಾಫಿ ,ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಅಬೂಬಕರ್ ಅನಿಲಕಟ್ಟೆ, ರಫೀಕ್ ಅಹ್ಸನಿ ಒಕ್ಕೆತ್ತೂರು,ಅಶ್ರಫ್ ಸಖಾಫಿ ಮಂಗಿಲಪದವು ,ಅಬೂಬಕರ್ ಸಖಾಫಿ ಮಾಡಾವು,ಹಮೀದ್ ಗಾಂಧಿನಗರ ಮುಂತಾದವರು ಉಪಸ್ಥಿತರಿದ್ದರು.
ಸಂಸ್ಥೆಯ ರೂವಾರಿ ಅಬ್ದುರ್ರಶೀದ್ ಸುರೈಜಿ ಸಖಾಫಿ ಮಾತನಾಡುತ್ತಾ’ ಸುಮಾರು 50 ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ, ವಸತಿ ನೀಡುತ್ತಿರುವ ಈ ಸಂಸ್ಥೆ ದಾನಿಗಳ ಸಹಕಾರದಿಂದ ಈ ಮಟ್ಟಕ್ಕೆ ತಲುಪಲು ಸಾಧ್ಯವಾಯಿತು ” ಎಂದು ಹೇಳಿದರು.
ಖಾಸಿಂ ಸಖಾಫಿ ಕೊಳಂಬೆ ಸ್ವಾಗತಿಸಿ ದರು.
ಮುಝಮ್ಮಿಲ್ ವಂದಿಸಿದರು





