ವಿಟ್ಲ: ಜಿಲ್ಲಾ ಮಟ್ಟದ ಟೋಲಿಡೊ ಟ್ಯಾಲೆಂಟ್ ಟೆಸ್ಟ್: ಕದೀಜಾ ಅಸೀಮಾ ಸನೂಫಾ ಪ್ರಥಮ ಸ್ಥಾನ
ವಿಟ್ಲ: ಟೋಲಿಡೊ ಇನ್ಸ್ಟಿಟ್ಯೂಟ್ ಆಫ್ ಎಕ್ಸೆಲೆನ್ಸ್ ಆಯೋಜಿಸಿದ ಜಿಲ್ಲಾ ಮಟ್ಟದ ಟ್ಯಾಲೆಂಟ್ ಟೆಸ್ಟ್ ಸ್ಪರ್ಧೆಯಲ್ಲಿ ಕದೀಜಾ ಅಸೀಮಾ ಸನೂಫಾ ಪ್ರಥಮ ಬಹುಮಾನ ಪಡೆದು ಕಿರೀಟ ಧರಿಸಿದ್ದಾರೆ. ಖ್ಯಾತ ಲೇಖಕ ಕೆ.ಎಂ. ಕೊಡುಂಗಾಯಿ ಅವರ ಪುತ್ರಿಯಾಗಿರುವ ಅಸೀಮಾ, ತನ್ನ ಮನೋಜ್ಞ ಪ್ರಸ್ತುತಿಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಈ ಸ್ಪರ್ಧೆಯಲ್ಲಿ ರಝಾಕ್ ನೀರ್ಕಾಜೆ ಮತ್ತು ಉಮೈರಾ ದಂಪತಿಗಳ ಪುತ್ರಿ ಮಿಸ್ಬಾ ರಿಫಾ ದ್ವಿತೀಯ ಬಹುಮಾನವನ್ನು ಗಳಿಸಿದರು. ದಾರುನ್ನೂರ್ ಮಾಡನ್ನೂರು ಕ್ಯಾಂಪಸ್‌ನ ವಿದ್ಯಾರ್ಥಿ ಮುಹಮ್ಮದ್ ಸಹಾದ್ ತೃತೀಯ ಸ್ಥಾನ ಪಡೆದು ತನ್ನ ಪ್ರತಿಭೆಯನ್ನು ಸಾಬೀತುಪಡಿಸಿದರು.

ಸಂಸ್ಥೆಯು ವಿಜೇತ ವಿದ್ಯಾರ್ಥಿಗಳಿಗೆ ಹಾರ್ದಿಕ ಅಭಿನಂದನೆಗಳನ್ನು ಅರ್ಪಿಸಿ, ಇವರು ಮುಂದಿನ ದಿನಗಳಲ್ಲಿ ಶ್ರೇಷ್ಠ ಸಾಧನೆಗಳನ್ನು ಸಾಧಿಸಲಿ ಎಂಬ ಆಶಯವನ್ನು ವ್ಯಕ್ತಪಡಿಸಿದೆ.





