ಪುತ್ತೂರು: ಕಾಡಾನೆ ದಾಳಿಗೆ ರಬ್ಬರ್ ಟ್ಯಾಪಿಂಗ್ ಮಾಡಲು ಹೋಗಿದ್ದ ಕಾರ್ಮಿಕ ಮಹಿಳೆ ಸಾವು
ಪುತ್ತೂರು : ಕಳೆದ ವರ್ಷ ಕಾಡಾನೆ ದಾಳಿಯಿಂದ ಅಪಾರ ಪ್ರಮಾಣದ ಕೃಷಿ ಹಾನಿಯಿಂದ ರೈತರು ಕಂಗಾಲಾಗಿದ್ದರು. ಒಂಟಿ ಸಲಗದ ಉಪಟಳದಿಂದ ಕಂಗಾಲಾಗಿದ್ದ ರೈತರ ಆಕ್ರೋಶದ ಬಳಿಕ ಅರಣ್ಯ ಇಲಾಕೆ ಆನೆಯನ್ನು ಕಾಡಿಗೆ ಅಟ್ಟುವ ಕೆಲಸ ಪುತ್ತೂರಿನಲ್ಲಿ ನಡೆದಿತ್ತು.
ಆದರೆ ಇದೀಗ ಮತ್ತೆ ಕಾಡಾನೆ ನಾಡಿಗೆ ಲಗ್ಗೆ ಇಟ್ಟಿದ್ದು, ಕಾರ್ಮಿಕ ಮಹಿಳೆಯೊಬ್ಬರ ಜೀವ ಬಲಿ ಪಡೆದುಕೊಂಡಿದೆ. ಮುಂಜಾನೆ ಎದ್ದು ರಬ್ಬರ್ ಟ್ಯಾಪಿಂಗ್ ಮಾಡಲು ಹೋಗಿದ್ದ ಕಾರ್ಮಿಕ ಮಹಿಳೆಯನ್ನು ತುಳಿದು ಸಾಯಿಸಿದೆ. ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅರ್ತಿಯಡ್ಕ ಸಿಆರ್ಸಿ ಕಾಲೋನಿ ನಿವಾಸಿ ಮಹಿಳೆ ಆನೆ ದಾಳಿಗೆ ಮೃತ ಪಟ್ಟಿದ್ದಾರೆ.
ಆನೆ ದಾಳಿಗೆ ಕಾರ್ಮಿಕ ಮಹಿಳೆ ಮೃತಪಟ್ಟ ಘಟನೆ ಗೊತ್ತಾಗುತ್ತಲೆ ಸ್ಥಳಕ್ಕೆ ಕಾರ್ಮಿಕರು ಧಾವಿಸಿ ಬಂದಿದ್ದಾರೆ.





