December 15, 2025

ಡಿಜಿಟಲ್ ಕಂಟೆಂಟ್ ಕ್ರಿಯೆಟರ್ ಮಿಶಾ ಅಗರ್ವಾಲ್ ನಿಗೂಢವಾಗಿ ಸಾವು

0
image_editor_output_image-1119063160-1745670474457.jpg

ಮುಂಬೈ: ಚಿಕ್ಕ ವಯಸ್ಸಿನಲ್ಲೇ ಡಿಜಿಟಲ್ ಕಂಟೆಂಟ್ ಕ್ರಿಯೆಷನ್ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದ 24 ವರ್ಷ ಪ್ರಾಯದ ಮಿಶಾ ಅಗರ್ವಾಲ್ ಎಂಬ ಯುವತಿ ತನ್ನ 25ನೇ ಹುಟ್ಟುಹಬ್ಬಕ್ಕೆ 2 ದಿನವಿರುವಾಗಲೇ ಇಹಲೋಕ ತ್ಯಜಿಸಿದ್ದಾಳೆ.

ಅವರ ಕುಟುಂಬವು ಏಪ್ರಿಲ್ 25 ರಂದು ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯ ಮೂಲಕ ಸುದ್ದಿಯನ್ನು ದೃಢಪಡಿಸಿದೆ. ಸೋಶಿಯಲ್ ಮೀಡಿಯಾ ಪ್ರಭಾವಿ ಆಗಿ, ರೀಲ್ಸ್ ಮೂಲಕ ಹಲವು ಕಂಟೆಂಟ್‌ಗಳನ್ನು ಮಾಡಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದ ಮಿಶಾ ಅಗರ್ವಾಲ್ ನಿಧನರಾಗಿದ್ದಾರೆ.

ಮಿಶಾ ಅಗರ್ವಾಲ್ ಕಾಮಿಡಿ ಕಂಟೆಂಟ್ ಗಳನ್ನು ಕ್ರಿಯೆಟ್ ಮಾಡಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದರು. ಸುಮಾರು 3 ಲಕ್ಷಕ್ಕೂ ಪಾಲೋವರ್ಸ್ ಗಳನ್ನು ಅವರು ಹೊಂದಿದ್ದರು. ಕೆಲವು ಸುದ್ದಿಗಳ ಪ್ರಕಾರ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿದೆ. ಆದರೆ ಮಿಶಾ ಅವರ ಸಾವಿಗೆ ಕಾರಣದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ.

Leave a Reply

Your email address will not be published. Required fields are marked *

error: Content is protected !!